ಸುಂಟಿಕೊಪ್ಪ, ಡಿ. ೨೬: ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಸುಂಟಿಕೊಪ್ಪ ದ್ವಾರಕಾ ಹೊಟೇಲ್ ಹಾಲ್ನಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಸುದೇವ್ ಹಾಗೂ ಪ್ರಶಾಂತ್ ಕೋಕ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ತಾಲೂಕು ಓಬಿಸಿ ಪ್ರಧಾನ ಕಾರ್ಯದರ್ಶಿ ಪಿಆರ್ ಸುನಿಲ್ ಕುಮಾರ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಧೀಮಂತ ನಾಯಕ ಹಾಗೂ ಮಾಜಿ ಪ್ರಧಾನಿ ವಾಜಪೇಯಿ ಅವರಾಗಿದ್ದು ಅಜಾತ ಶತ್ರುವಾಗಿ ಎಲ್ಲರೊಂದಿಗೂ ಸ್ನೇಹಮಯವಾಗಿ ಉತ್ತಮ ಆಡಳಿತ ನಡೆಸಿದ ನಾಯಕರಾಗಿದ್ದಾರೆ ಎಂದರು.
ಈ ಸಂದರ್ಭ ಬಿಜೆಪಿ ಪಕ್ಷದ ಹಿರಿಯರಾದ ಸಹದೇವನ್, ಜಿಲ್ಲಾ ಓಬಿಸಿ ಉಪಾಧ್ಯಕ್ಷ ಬಿ.ಕೆ. ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಬೂತ್ ಸಮಿತಿಯ ಸದಸ್ಯರುಗಳಾದ ರಾಕೇಶ್, ಗಣೇಶ್, ಸುದೇಶ್, ರವಿ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.