ವೀರಾಜಪೇಟೆ, ಡಿ. ೨೬: ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಎರಡೂ ಕಾಲುಗಳನ್ನು ಕಳೆದುಕೊಂಡ ಮೀನುಪೇಟೆ ನಿವಾಸಿ ಧನೇಶ್(ಧನು)ರವರನ್ನು ಓಣಂ ಆಚರಣಾ ಸಮಿತಿಯ ಪದಾಧಿಕಾರಿಗಳು ಭೇಟಿಯಾಗಿ ಚಿಕಿತ್ಸಾ ವೆಚ್ಚಕ್ಕಾಗಿ ಆರ್ಥಿಕ ನೆರವನ್ನು ನೀಡಿದರು.
ಶಾಸಕ ಕೆ.ಜಿ. ಬೋಪಯ್ಯನವರ ವಿಶೇಷ ಆಸಕ್ತಿಯಿಂದ ಅತ್ಯಾಧುನಿಕ ಗಾಲಿ ಕುರ್ಚಿಯನ್ನು ಒದಗಿಸಲಾಯಿತು. ಧನೇಶ್‌ರವರ ವೈದ್ಯರ ಸಲಹೆ ಪಡೆದು ಅವರಿಗೆ ಕೃತಕ ಕಾಲು ಜೋಡಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂಬ ಭರವಸೆಯನ್ನು ನೀಡಿದರು. ಧನೇಶ್‌ರವರ ತಾಯಿಯ ಕೋರಿಕೆಯ ಮೇರೆಗೆ ಅಂಬಟ್ಟಿ ಗ್ರಾಮದಲ್ಲಿನ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದÀÄ ಸಂಘಟನೆ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಓಣಂ ಆಚರಣಾ ಸಮಿತಿಯ ಪಿ.ಜಿ. ಸುಮೇಶ್, ಕಾರ್ಯದರ್ಶಿ ಸಿ.ಆರ್. ಬಾಬು, ಗೌರವಾಧ್ಯಕ್ಷ ಪದ್ಮನಾಭನ್, ಸಲಹೆಗಾರರಾದ ಪಿ.ಜೆ. ವಿಶ್ವನಾಥ್, ಚೈತನ್ಯ ಮಠಪುರದ ಸಿ.ಆರ್. ವಾಸು ಹಾಜರಿದ್ದರು.