ಮಡಿಕೇರಿ, ಡಿ. ೨೬: ಬಿರುನಾಣಿ ವಾರ್ಡ್ಸಭೆ ತಾ. ೨೭ ರಂದು (ಇಂದು) ಬಿರುನಾಣಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಾರ್ಡ್ ಅಧ್ಯಕ್ಷ ಬಿ.ಕೆ. ನಾಣಯ್ಯ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ.

ಪರಕಟಗೇರಿ ವಾರ್ಡ್ಸಭೆ ತಾ. ೨೭ ರಂದು (ಇಂದು) ಪರಕಟಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಅಧ್ಯಕ್ಷ ಎ.ಯು. ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ.

ಬಾಡಗರಕೇರಿ-ಪೊರಾಡು ವಾರ್ಡ್ಸಭೆ ತಾ. ೨೮ ರಂದು ಬಾಡಗರಕೇರಿ ಮಹಿಳಾ ಸಮಾಜ ಕಟ್ಟಡದಲ್ಲಿ ಹೆಚ್.ಕೆ. ಕಾಳಿಯಮ್ಮ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ.

ತೆರಾಲು ವಾರ್ಡ್ಸಭೆ ತಾ. ೨೯ ರಂದು ತೆರಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ. ಕುಳಿಯ ಅವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.