ಮಡಿಕೇರಿ, ಡಿ. ೨೬: ಮೇಕೇರಿ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ತಾ.೨೮ರಿಂದ ಜ.೧ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಪೂರ್ಣಯ್ಯ, ಕಾರ್ಯದರ್ಶಿ ಪಿ.ಕೆ. ವೇಲಾಯುಧನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾ.೨೮ ರಂದು ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ದೇವರಲ್ಲಿ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ಬೆಳಿಗ್ಗೆ ೭ ಗಂಟೆಗೆ ತೋರಣ ಸಂಸ್ಕಾರ, ಧ್ವಜಸ್ಥಂಭ ಪೂಜೆ, ಉಗ್ರಾಣ ಪೂಜೆ, ಬೆಳಿಗ್ಗೆ ೭.೩೦ ಕ್ಕೆ ಶ್ರೀ ಪನ್ನಂಗಾಲತಮ್ಮೆ ದೇವಿ ಸನ್ನಿಧಿಗೆ ಮೆರವಣಿಗೆ ತೆರಳಿ ಪೂಜೆ ಹಾಗೂ ಅನುಗ್ರಹ ಬೇಡಿಕೆ ಪೂಜೆ, ಬೆಳಿಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಗ್ರಾಮದ ನಾಲ್ಕು ದಿಕ್ಕುಗಳಿಂದ ಕಾಲ್ನಡಿಗೆಯ ಮೂಲಕ ಸಾಗಿ ಬಂದು ದೇವಸನ್ನಿಧಿಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ೭.೩೦ರಿಂದ ೯.೩೦ರವರೆಗೆ ಶ್ರೀ ಕಲ್ಲಡ್ಕ ವಿಠ್ಠಲ ನಾಯಕ್ ಹಾಗೂ ತಂಡದವರಿAದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ತಾ.೨೯ ರ ಬೆಳಿಗ್ಗೆ ೬ ಗಂಟೆ ಯಿಂದ ಮಧ್ಯಾಹ್ನ ೧೨.೩೦ ರವರೆಗೆ ಪುಣ್ಯಾಹವಾಚನ, ದೇವನಾಂದಿ, ಶ್ರೀ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಅಂಕುರ ಪೂಜೆ, ನವಗ್ರಹ ಹೋಮ, ನವಗ್ರಹರಿಗೆ ಅನುಜ್ಞಾಕಲಶ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ., ಸಂಜೆ ೬ ರಿಂದ ೯.೩೦ರವೆಗೆ ದುರ್ಗಾ ದೀಪ ನಮಸ್ಕಾರ ಪೂಜೆ, ಅಘೋರ ಹೋಮ, ಪ್ರಾಯಶ್ಚಿತ ಹೋಮ, ದೇವರಿಗೆ ಅದಿವಾಸ ಹೋಮ, ಮಹಾ ಪೂಜೆ, ದೇವರಿಗೆ ಶಯನ, ಅಂಕುರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭.೩೦ರಿಂದ ೯.೩೦ರವರೆಗೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಭಕ್ತಿ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾ.೩೦ರಂದು ಬೆಳಿಗ್ಗೆ ೬ ಗಂಟೆಯಿAದ ೧೨.೩೦ರವರೆಗೆ ಸ್ವಸ್ತಿ ಪುಣ್ಯಾಹವಾಚನ, ಅಂಕುರಪೂಜೆ, ಶ್ರೀ ಗಣಹೋಮ, ಪ್ರತಿಷ್ಠಾ ಹೋಮ (ಬೆ.೧೧.೩೦ರ ಮೀನಲಗ್ನದಲ್ಲಿ ನೂತನ ಗರ್ಭಗೃಹದಲ್ಲಿ) ಶ್ರೀ ಗೌರಿಶಂಕರನ ಪುನರ್‌ಪ್ರತಿಷ್ಠೆ ಪರಿವಾರ ದೇವತೆಗಳಾದ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಅಷ್ಠಬಂಧ ಲೇಪನ, ಮಹಾಪೂಜೆ, ಆಶ್ಲೇಷ ಬಲಿ, ನಾಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ರಿಂದ ೮.೩೦ರವರೆಗೆ ಸುದರ್ಶನ ಹೋಮ, ಅಂಕುರ ಪೂಜೆ, ಶಾಂತಿ ಪ್ರಾಯಶ್ಚಿತ ಹೋಮ, ಸಾಮಾನ್ಯ ಪ್ರಾಯಶ್ಚಿತ ಹೋಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯ ಲಿದೆ. ಇದರೊಂದಿಗೆ ಸಂಜೆ ೭.೩೦ ರಿಂದ ೯.೩೦ ರವೆಗೆ ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ, ಹಾಕತ್ತೂರು ಭಜನಾ ತಂಡದಿAದ ಭಕ್ತಿ ಸಂಗೀತ ಶಿವಾರ್ಚನೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿಯಿತ್ತರು.

ತಾ.೩೧ರಂದು ಬೆಳಿಗ್ಗೆ ೬ ಗಂಟೆಯಿAದ ೧೨.೩೦ರವರೆಗೆ ಪುಣ್ಯಾಹವಾಚನ, ಶ್ರೀ ಗಣಹೋಮ, ಶ್ರೀ ರುದ್ರ ಪಾರಾಯಣ, ರುದ್ರಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶ ಅಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಯಿAದ ೮.೩೦ರವರೆಗೆ ಕಲಶ ಮಂಟಪ ಸಂಸ್ಕಾರ, ಅಂಕುರಪೂಜೆ, ಕುಂಭೇಷ ಪೂಜೆ, ಕರ್ಕರಿ ಪೂಜೆ, ಕಲಶಪುರಣೆ, ಬ್ರಹ್ಮ ಕಲಶ ಪೂಜೆ, ಅಧಿವಾಸ ಹೋಮ, ಅಂಕುರ ಪೂಜೆ, ಅಂಕುರ ವಿಸರ್ಜನೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ರಾತ್ರಿ ೮:೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭಾ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಲಿದ್ದು, ಇದರೊಂದಿಗೆ ಸಂಜೆ ೭.೩೦ರಿಂದ ೯.೩೦ರವರೆಗೆ ಜಿಲ್ಲೆಯ ಖ್ಯಾತ ಹಿನ್ನೆಲೆ ಗಾಯಕ ರವಿ ಭೂತನಕಾಡು, ತಂಡದಿAದ ಭಕ್ತಿ ಲಹರಿ ಕಾರ್ಯಕ್ರಮ ನಡೆಯಲಿದೆ.

ಜನವರಿ ೧ ರಂದು ಬೆಳಗ್ಗೆ ೬ ಗಂಟೆಯಿAದ ೧೨.೩೦ರವರೆಗೆ ಪುಣ್ಯಾಹವಾಚನ, ಮಂಗಳ ಗಣಯಾಗ, ಗ್ರಹ್ಮಕಲಶ ಪೂಜೆ, ಶ್ರೀ ಗೌರಿಶಂಕರ ದೇವರಿಗೆ ಬ್ರಹ್ಮಕಲಶಾಭಿಷೇಕ, ಶ್ರೀ ಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರಿಗೆ ಕಲಶ ಅಭಿಷೇಕ, ದೇವರಿಗೆ ಅಲಂಕಾರ, ಮಹಾಪೂಜೆ, ಮಂಗಳ ಮಂತ್ರಾಕ್ಷತೆ, ಆಶೀರ್ವಚನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಇದರೊಂದಿಗೆ ಬೆಳಿಗ್ಗೆ ೧೧ ರಿಂದ ೧೨ ಗಂಟೆಯವರೆಗೆ ಖ್ಯಾತ ವಾಗ್ಮಿಗಳು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಮಿತಿಯ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ (ಕಲ್ಲಡ್ಕ) ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಅವರುಗಳು ವಿವರಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಕೆ.ಆರ್. ಬೆಳ್ಯಪ್ಪ, ಸದಸ್ಯರಾದ ಉದಯ, ವಸಂತ್ ಕುಮಾರ್, ಪುನರ್ ಪ್ರತಿಷ್ಠೆ ಮತ್ತು ಅಷ್ಠಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಟಿ.ಎ. ಕುಮಾರ್ ಉಪಸ್ಥಿತರಿದ್ದರು.