ಮಡಿಕೇರಿ, ಡಿ. ೨೬: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಹುಟ್ಟುಹಬ್ಬದ ಅಂಗವಾಗಿ ಲೇಖನ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
‘ಸ್ವಾಮಿ ವಿವೇಕಾನಂದ ಮತ್ತು ಜಾತ್ಯತೀತತೆಯ ಪರಿಕಲ್ಪನೆ’ ಎಂಬ ವಿಷಯದಡಿ ಪಿಯುಸಿಯಿಂದ ಪದವಿವರೆಗಿನ ಯುವಕ ಯುವತಿಯರು ೮೦೦ ಪದಗಳಿಗೆ ಮೀರದಂತೆ ಲೇಖನಗಳನ್ನು ಬರೆದು ಕಳುಹಿಸಬಹುದು. ಲೇಖನ ನಮ್ಮ ಕೈ ಸೇರಲು ಕೊನೆ ದಿನಾಂಕ ೮.೧.೨೦೨೩. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಲೇಖನಗಳನ್ನು ಕಳುಹಿಸುವ ಸಂದರ್ಭ ಸ್ಪರ್ಧಿಗಳ ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡತಕ್ಕದ್ದು. ಲೇಖನವು ಕನ್ನಡ ಭಾಷೆಯಲ್ಲಿ ಇರತಕ್ಕದ್ದು. ಲೇಖನಗಳನ್ನು ಪಿ.ಪಿ. ಸುಕುಮಾರ, ಅಧ್ಯಕ್ಷರು, ಕೊಡಗು ಜಿಲ್ಲಾ ಯುವ ಒಕ್ಕೂಟ, ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಮಡಿಕೇರಿ ಇಲ್ಲಿಗೆ ಜನವರಿ ೮ ರೊಳಗೆ ನೇರವಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು ಎಂದು ತಿಳಿಸಲಾಗಿದೆ.