ಬೆಳಗಾವಿ ಗಡಿ ವಿವಾದಕ್ಕೆ ಸಂಬAಧಿಸಿದAತೆ ಮಹಾರಾಷ್ಟç ವಿಧಾನಸಭೆ ನಿರ್ಣಯ ಅಂಗೀಕರಿಸಿದೆ
ನಾಗ್ಪುರ, ಡಿ. ೨೭: ಮಹಾರಾಷ್ಟç ವಿಧಾನಸಭೆ ಮಂಗಳವಾರ ಅವಿ ರೋಧವಾಗಿ ಕರ್ನಾಟಕದ ಗಡಿ ಸಮಸ್ಯೆಗೆ ನಿರ್ಣಯ ಅಂಗೀಕರಿಸಿದೆ. ಮಹಾರಾಷ್ಟçದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕರ್ನಾಟಕದೊಂದಿಗೆ ವಿವಾದಿತ ಗಡಿ ಪ್ರದೇಶದಲ್ಲಿ ವಾಸಿಸುವವರಿಗೆ ಒಗ್ಗಟ್ಟು ವ್ಯಕ್ತಪಡಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಕೇಂದ್ರ ಗೃಹ ಸಚಿವ ರೊಂದಿಗಿನ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಜಾರಿಗೊಳಿಸಲು ಕರ್ನಾಟಕವನ್ನು ಕೇಂದ್ರ ಸರ್ಕಾರ ಒತ್ತಾಯಿಸಬೇಕು ಮತ್ತು ಗಡಿ ಪ್ರದೇಶಗಳಲ್ಲಿನ ಮರಾಠಿ ಜನರ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ಸರ್ಕಾರಕ್ಕೆ ತಿಳುವಳಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಮಂಡಿಸಿದ ನಿರ್ಣಯವನ್ನು ಓದಿದರು. ಇದಕ್ಕೂ ಮೊದಲು, ಶಿಂಧೆ ಅವರು ತಮ್ಮ ಪೂರ್ವವರ್ತಿ ಮತ್ತು ಮಹಾರಾಷ್ಟç ವಿಕಾಸ್ ಅಘಾಡಿ (ಎಂವಿಎ) ನಾಯಕ ಉದ್ಧವ್ ಠಾಕ್ರೆ ಅವರು ರಾಷ್ಟç ರಾಜಧಾನಿಗೆ ತಮ್ಮ ಭೇಟಿಯನ್ನು ಟೀಕಿಸಿದರು ಮತ್ತು ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದರು. ನಮಗೆ ಇತರರಿಂದ ಯಾವುದೇ ಪಾಠ ಅಗತ್ಯವಿಲ್ಲ. ಗಡಿ ಪ್ರದೇಶದಲ್ಲಿ ವಾಸಿಸುವವರ ಜೊತೆ ನಾವು ದೃಢವಾಗಿ ನಿಂತಿದ್ದೇವೆ. ನಾವು ವಿಧಾನಸಭೆಯಲ್ಲಿ ನಿರ್ಣಯವನ್ನು ಜಾರಿಗೆ ತರುತ್ತೇವೆ ಎಂದು ಶಿಂಧೆ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸೋಮವಾರ ನಡೆಯುತ್ತಿರುವ ಮಹಾರಾಷ್ಟç ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಹಾರಾಷ್ಟç-ಕರ್ನಾಟಕ ಗಡಿ ವಿವಾದದ ವಿಷಯ ಪ್ರತಿಧ್ವನಿಸುತ್ತಿದ್ದಂತೆ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಶಿಂಧೆ ಅವರ ಈ ಹೇಳಿಕೆಯು ಸೋಮ ವಾರದಂದು ಪ್ರತಿಧ್ವನಿಸಿತು. ಮಹಾರಾಷ್ಟç ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸದನಕ್ಕೆ ಭರವಸೆ ನೀಡಿದರು. ನಾವು ಒಂದು ಇಂಚು ಕೂಡ ಹೋರಾಡುತ್ತೇವೆ. ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆಯ ನ್ಯಾಯಕ್ಕಾಗಿ ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಹೇಳಿದರು.
ಇತಿಹಾಸ ತಿರುಚುವಿಕೆ, ‘ಕಾಲ್ಪನಿಕ ಕಥೆ’ ಸೃಷ್ಟಿ ದೇಶಕ್ಕೆ ಅತ್ಯಂತ ಅಪಾಯ
ಚೆನ್ನೆöÊ, ಡಿ. ೨೭: ಇತಿಹಾಸ ತಿರುಚುವಿಕೆ ಮತ್ತು ಕೆಲವರು "ಕಾಲ್ಪನಿಕ ಕಥೆ"ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ "ಅಪಾಯಕಾರಿ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಇತಿಹಾಸ ಕಾಂಗ್ರೆಸ್ನ ೮೧ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಸಿಎಂ, ತಮ್ಮ ಸರ್ಕಾರ ಜಾತ್ಯತೀತವಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು. ಇತಿಹಾಸವನ್ನು ಅಧ್ಯಯನ ಮಾಡುವುದರಿಂದ ಯಾವುದೇ ಲಾಭ ಇಲ್ಲ. ಅದರಿಂದ ನೌಕರಿ ಸಿಗುತ್ತದೆಯೇ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಕೇವಲ ಪದವಿ ಮತ್ತು ಸಂಬಳಕ್ಕಾಗಿ ಇತಿಹಾಸ ಅಧ್ಯಯನ ಮಾಡಬಾರದು ಸ್ಟಾಲಿನ್ ಹೇಳಿದರು. ನಮ್ಮನ್ನು ತಿಳಿದುಕೊಳ್ಳಲು ನಾವು ಇತಿಹಾಸವನ್ನು ಅಧ್ಯಯನ ಮಾಡಬೇಕು. ಭೂತ ಕಾಲವನ್ನು ಅಧ್ಯಯನ ಮಾಡಿದವರು ಮಾತ್ರ ವರ್ತಮಾನದಲ್ಲಿ ಇತಿಹಾಸವನ್ನು ಸೃಷ್ಟಿಸಬಹುದು; ಭವಿಷ್ಯವನ್ನು ಊಹಿಸಬಹುದು. ಅಂತಹ ಇತಿಹಾಸವು ವಿಜ್ಞಾನ ಆಧಾರಿತ ಸತ್ಯವಾಗಿರಬೇಕು. ಕೆಲವರು ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಅದೇ ಇತಿಹಾಸ ಎಂದು ಹೇಳುತ್ತಾರೆ. ಜನ ಅವರನ್ನು ನಂಬಿ ಮೂರ್ಖರಾಗುತ್ತಾರೆ. ಆದರೆ ಅದನ್ನು ನಾವು ಒಪ್ಪಿಕೊಳ್ಳಬಾರದು ಎಂದು ಸ್ಟಾಲಿನ್ ಹೇಳಿದರು.
ಆರ್ಸೆಲರ್ ಮಿತ್ತಲ್ಗೆ ಹಂಚಿಕೆಯಾದ ಭೂಮಿ ವಾಪಸ್
ಬೆಳಗಾವಿ, ಡಿ. ೨೭: ಒಂದು ದಶಕದ ಹಿಂದೆ ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಕ್ಕು ಉತ್ಪಾದಕ ಆರ್ಸೆಲರ್ ಮಿತ್ತಲ್ಗೆ ಕೆಐ ಎಡಿಬಿಯಿಂದ ಹಂಚಿಕೆ ಮಾಡಿದ್ದ ಸುಮಾರು ೫,೦೦೦ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತಮಾಡಿದ ಸಿಎಂ, ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷಿö್ಮ ಮಿತ್ತಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದು, ಆ ವೇಳೆ ಭೂಮಿ ವಿಚಾರ ಪ್ರಸ್ತಾಪಿಸಿದೆ ಮತ್ತು ಭೂಮಿ ಸದ್ಬಳಕೆ ಮಾಡಿಕೊಳ್ಳಿ ಇಲ್ಲವೆ ವಾಪಸ್ ನೀಡಿ ಎಂದು ಅವರಿಗೆ ಹೇಳಿದೆ ಎಂದರು. ಆದರೆ ಅವರು ಪರ್ಯಾಯ ಯೋಜನೆ ರೂಪಿಸುವುದಾಗಿ ಹೇಳಿದರು. ಹೀಗಾಗಿ ಅವರಿಗೆ ನೋಟೀಸ್ ನೀಡಿದ್ದೇವೆ. ಮಿತ್ತಲ್ಗೆ ಹಂಚಿಕೆಯಾದ ೫,೦೦೦ ಎಕರೆ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು. ೨೦೧೦ ರಲ್ಲಿ, ಬಳ್ಳಾರಿಯ ಕುಡಿತಿನಿ ಮತ್ತು ಹರಗಿನದೋಣಿ ಗ್ರಾಮಗಳಲ್ಲಿ ಸ್ಟೀಲ್ ಪ್ಲಾಂಟ್ಗಾಗಿ ರಾಜ್ಯ ಸರ್ಕಾರ ಸುಮಾರು ೫,೦೦೦ ಎಕರೆ ಭೂಮಿ ಹಂಚಿಕೆ ಮಾಡಿತ್ತು. ಈ ಜಾಗದಲ್ಲಿ ಆರ್ಸೆಲರ್ ಮಿತ್ತಲ್ ೩೦ ಸಾವಿರ ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿತ್ತು.
ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರ
ಬೆಳಗಾವಿ, ಡಿ. ೨೭: ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊAಡಿತು. ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಭೂಸಾರಿಗೆ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು, ಹಲವು ಮಾದರಿಗಳ ಪ್ರಾಧಿಕಾರ, ಇಲಾಖೆಗಳ ಬದಲಾಗಿ ಉನ್ನತಾಧಿಕಾರದ ಒಂದೇ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಮಹಾನಗರಕ್ಕೆ ಸುತ್ತಮುತ್ತಲಿನ ಪುರಸಭೆ, ನಗರಸಭೆಗಳು ಸುಮಾರು ೧೧೦ ಹಳ್ಳಿಗಳು ಸೇರ್ಪಡೆಯಾಗಿವೆ. ಮಹಾನಗರದ ಮೂಲ ಸೌಕರ್ಯಗಳಿಗೂ ಗ್ರಾಮೀಣ ಮೂಲ ಸೌಕರ್ಯಗಳಿಗೂ ವ್ಯತ್ಯಾಸ ಇರುತ್ತದೆ. ಕಳೆದ ಸುಮಾರು ೨೫ ವರ್ಷಗಳಿಂದ ಬೆಂಗಳೂರಿನ ರಸ್ತೆಗಳ ಅಗಲೀಕರಣವಾಗಿಲ್ಲ. ಪ್ರತಿನಿತ್ಯ ಸುಮಾರು ೫ ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಮಹಾನಗರದಲ್ಲಿ ಸುಮಾರು ೧ ಕೋಟಿ ೨೫ ಲಕ್ಷ ಜನಸಂಖ್ಯೆ ಇದೆ, ಸುಮಾರು ೧ ಕೋಟಿ ೩ ಲಕ್ಷ ವಾಹನಗಳಿವೆ. ಬರುವ ದಿನಗಳಲ್ಲಿ ಜನಸಂಖ್ಯೆಗಿAತ ವಾಹನಗಳ ಸಂಖ್ಯೆಯೇ ಅಧಿಕವಾಗಲಿದೆ.ಇವುಗಳ ನಿರ್ವಹಣೆಯನ್ನು ಬಹು ವಿಧದ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯದ ಜವಾಬ್ದಾರಿ ಹಾಗೂ ಸಮಗ್ರ ಪರಿಹಾರ ಕಂಡುಕೊಳ್ಳಲು ವಿಧೇಯಕ ತರಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ನಿಗೂಢ ಸಾವು
ಒಡಿಶಾ, ಡಿ. ೨೭: ರಷ್ಯಾ-ಉಕ್ರೇನ್ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ ೬೪ ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೊಟೇಲ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಾ. ೨೨ ಮತ್ತು ೨೫ ರಂದು, ಇಬ್ಬರು ರಷ್ಯಾದ ಪ್ರವಾಸಿಗರು ಭಾರತದ ಒಡಿಶಾದ ಹೊಟೇಲ್ನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದರು. ವರದಿಗಳ ಪ್ರಕಾರ, ತಾ. ೨೧ ರಂದು ನಾಲ್ವರು ರಷ್ಯಾದ ಪ್ರವಾಸಿಗರು ಒಡಿಶಾದ ರಾಯಗಡದಲ್ಲಿರುವ ಸಾಯಿ ಇಂಟರ್ನ್ಯಾಷನಲ್ ಹೊಟೇಲ್ಗೆ ಭೇಟಿ ನೀಡಿದ್ದರು. ಅವರಲ್ಲಿ ಒಬ್ಬರಾದ ವ್ಲಾಡಿಮಿರ್ ಬುಡಾನೋವ್ ಅವರು ತಾ. ೨೨ ರಂದು ಹೊಟೇಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬುಡಾನೋವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ತಾ. ೨೫ ರಂದು ಬುಡಾನೋವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಪಾವೆಲ್ ಆಂಟೋವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ ಖಚಿತಪಡಿಸಿದ್ದಾರೆ. ಆಂಟೊನೊವ್ ಅವರು ಒಡಿಶಾದ ರಾಯಗಡ ಪ್ರದೇಶದಲ್ಲಿ ತಮ್ಮ ೬೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಸಾವನ ಸುದ್ದಿ ಬಂದಿದೆ. ಪೊಲೀಸರ ಪ್ರಕಾರ, ಅವರು ಹೋಟೆಲ್ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.