ಚೆಟ್ಟಳ್ಳಿ, ಡಿ. ೨೭: ದಕ್ಷಿಣ ಕೊಡಗಿನ ಕಿರು ಕುಕ್ಕೆ ಸುಬ್ರಹ್ಮಣ್ಯ ಎಂದೇ ಖ್ಯಾತಿ ಹೊಂದಿರುವ ಬೈರಂಬಾಡ ಸುಬ್ರಹ್ಮಣ್ಯ ದೇವಾಲಯ ಸನ್ನಿಧಿಯಲ್ಲಿ ತಾ. ೨೮ ರಂದು (ಇಂದು) ಕಿರುಷಷ್ಠಿ ಉತ್ಸವಕ್ಕೆ ಸಿದ್ಧತೆ ನಡೆದಿದೆ.
ನವೆಂಬರ್ ೨೯ರಂದು ಇದೇ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಉತ್ಸವ ನಡೆದು ಒಂದು ತಿಂಗಳಲ್ಲಿ ಕಿರುಷಷ್ಠಿ ಉತ್ಸವ ನಡೆಯಲಿದೆ. ತಾ. ೨೮ರ ಬೆಳಗ್ಗಿಯಿಂದಲೇ ಭಕ್ತಾದಿಗಳಿಗೆ ಹರಕೆ ಸಲ್ಲಿಸಲು ಅವಕಾಶವಿದ್ದು ಪೂರ್ವಾಹ್ನ ೧೧ ಗಂಟೆಗೆ ವಿಶೇಷ ಪೂಜಾ ಕೈಂಕರ್ಯದ ನಂತರ ದೇವರ ತಡ್‌ಂಬು ಹೊರತರುವ ಮೂಲಕ ದೇವರ ದರ್ಶನಕ್ಕೆ ಅವಕಾಶವಿದೆ. ತೀರ್ಥ ಪ್ರಸಾದದ ನಂತರ ಅನ್ನಸಂತರ್ಪಣೆ ನಡೆಯಲಿದೆ.