(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಡಿ. ೨೭: ನಾಗರಹೊಳೆ ರಾಷ್ಟಿçÃಯ ಉದ್ಯಾನಕ್ಕೆ ಸೇರಿರುವ ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣವೊಂದರ ಮೇಲೆ ಗುಂಡು ಹಾರಿಸಲಾಗಿದ್ದು, ಗುಂಡೇಟಿಗೆ ಒಳಗಾದ ಕಾಡುಕೋಣ ಗಾಭರಿಗೊಂಡು ಅರಣ್ಯ ಪ್ರದೇಶದಿಂದ ಓಟಕಿತ್ತು ಮುಖ್ಯ ರಸ್ತೆಯ ಬಳಿ ಆಗಮಿಸಿ, ಮುಂದಿನ ಅರಣ್ಯ ಪ್ರದೇಶಕ್ಕೆ ತೆರಳಲಾರದೆ ರಸ್ತೆ ಬದಿಯಲ್ಲೇ ಅಸುನೀಗಿದ ಘಟನೆ ಸಂಭವಿಸಿದೆ.

ಗಡಿಭಾಗವಾದ ತಿತಿಮತಿ ಸಮೀಪದ ಆನೆಚೌಕೂರು ಬಳಿ ಇರುವ ಮತ್ತಿಗೋಡು ಸಾಕಾನೆ ಶಿಬಿರದ ಅನತಿ ದೂರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಕಾಡುಕೋಣ ಮೃತಪಟ್ಟು ಬಿದ್ದಿರುವ ಮಾಹಿತಿ ಪಡೆದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ರಾಜ್ಯ ಹೆದ್ದಾರಿ ಬಳಿ ಮೃತಪಟ್ಟ ಕಾಡುಕೋಣವನ್ನು ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳ ಸಹಾಯ ಪಡೆದು ಸಮೀಪದ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು. ಅರಣ್ಯ ಇಲಾಖೆಯ ಪಶುವೈದ್ಯ ಇಲಾಖೆಯ ವೈದ್ಯರ ತಂಡ ಸ್ಥಳಕ್ಕೆ

(ಮೊದಲ ಪುಟದಿಂದ) ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.

ಇದೀಗ ರಾಷ್ಟಿçÃಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣಕ್ಕೆ ಗುಂಡೇಟು ಬಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು - ಕೊಡಗು ಸಂಪರ್ಕ ರಸ್ತೆ ಆಗಿರುವ ರಾಜ್ಯ ಹೆದ್ದಾರಿಯಲ್ಲಿ ಈ ಹಿಂದೆ ಕಾಡಾನೆಯೊಂದು ರಸ್ತೆ ದಾಟುವ ವೇಳೆ ಅಪಘಾಕ್ಕಿಡಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತು. ಅದೇ ರೀತಿಯಲ್ಲಿ ರಸ್ತೆ ಅಪಘಾತದಲ್ಲಿ ಕಾಡುಕೋಣ ಮೃತಪಟ್ಟಿರಬಹುದು ಎಂದು ಮುಂಜಾನೆಯ ವೇಳೆ ಸಾರ್ವಜನಿಕರು ಅಂದಾಜಿಸಿದ್ದರು. ತದನಂತರ ಅಧಿಕಾರಿಗಳ ಪರಿಶೀಲನೆ ಯಲ್ಲಿ ಗುಂಡೇಟಿನಿAದ ಮೃತಪಟ್ಟ ಬಗ್ಗೆ ತಿಳಿದು ಬಂದಿದೆ.

ಮುAಜಾನೆಯ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಮತ್ತಿಗೋಡು ಅರಣ್ಯ ಪ್ರದೇಶದ ಕೆಲವು ಅಧಿಕಾರಿಗಳು ಆರಂಭಿಕ ಹಂತದಲ್ಲಿ ಹುಲಿ ಹಾಗೂ ಕಾಡುಕೋಣ ನಡುವೆ ಜಗಳ ಏರ್ಪಟ್ಟು ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದರು.

ಸ್ಥಳಕ್ಕೆ ತೆರಳಿದ ಮಾಧ್ಯಮ ಪ್ರತಿನಿಧಿಗೆ ಈ ಬಗ್ಗೆ ಅಸ್ಪಷ್ಟ ಮಾಹಿತಿ ಒದಗಿಸಿದ್ದರು.ಯಾರನ್ನು ಕೂಡ ಮೃತಪಟ್ಟ ಕಾಡುಕೋಣ ಬಳಿ ತೆರಳಲು ಅವಕಾಶ ನೀಡಿರಲಿಲ್ಲ. ೧೧ ಗಂಟೆಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಂತರ ಕಾಡುಕೋಣವು ಗುಂಡೇಟು ತಗುಲಿ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಯಿತು.

ವೈದ್ಯ ಡಾ.ರಮೇಶ್ ಪರೀಕ್ಷೆ ನಡೆಸಿದರು. ಸ್ಥಳದಲ್ಲಿ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಆರ್.ಎಫ್.ಒ.ದಿಲೀಪ್, ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ರಾಜ್ಯ ಹೆದ್ದಾರಿಯಲ್ಲಿ ಇಂತಹ ಘಟನೆ ನಡೆದಿದ್ದರೂ ಕೆಲವು ಅರಣ್ಯ ಸಿಬ್ಬಂದಿಗಳು ಇಲ್ಲಿ ಯಾವುದೇ ರೀತಿಯ ಘಟನೆ ನಡೆದಿಲ್ಲ ಎಂಬ ಸುಳ್ಳು ಮಾಹಿತಿ ಒದಗಿಸಿ, ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದರು. ಘಟನೆ ಹಿಂದೆ ಕೆಲವು ಅರಣ್ಯ ಸಿಬ್ಬಂದಿಗಳ ಪರೋಕ್ಷ ಬೆಂಬಲ ಇರಬಹುದೇ.? ಎಂಬ ಸಂಶಯ ಮೂಡಿದೆ. ಒಟ್ಟಿನಲ್ಲಿ ಹಿರಿಯ ನಿಷ್ಠಾವಂತ ಅಧಿಕಾರಿಗಳ ಸಮಗ್ರ ತನಿಖೆಯ ನಂತರ ಸತ್ಯಾಂಶ ಹೊರಬರಬೇಕಾಗಿದೆ.