ಮಡಿಕೇರಿ, ಡಿ. ೨೭: ಕೊಡಗು ಜಿಲ್ಲೆಯ ಜಮ್ಮಾಬಾಣೆ ಮತ್ತು ಇತರೆ ಜಮೀನುಗಳಿಗೆ ಕಂದಾಯ ನಿಗದಿಮಾಡುವಂತೆ ೨೦೧೧ರಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದು ಪಡಿಯಾಗಿ ಕಂದಾಯ ವಿಧಿಸಲು ಅವಕಾಶ ಮಾಡ ಲಾಗಿದೆ. ಆದರೆ ಜಿಲ್ಲೆಯಲ್ಲಿ ಜಮ್ಮಾ ಮತ್ತು ಇತರ ಬಾಣೆ ಜಾಗಗಳಲ್ಲಿ ಕೃಷಿ ಮಾಡಿದ್ದರೆ ಮಾತ್ರ ಕಂದಾಯ ವಿಧಿಸಲಾಗುತ್ತಿದ್ದು, ಇದು ತಿದ್ದುಪಡಿ ಆದೇಶದ ಉಲ್ಲಂಘನೆ ಯಾಗುವದರಿಂದ ಎಲ್ಲಾ ಜಮೀನಿಗೂ ಕಂದಾಯ ವಿಧಿಸುವ ಕುರಿತು ಶಾಸಕ ಕೆ.ಜಿ. ಬೋಪಯ್ಯ ಅವರು ಸದನದಲ್ಲಿ ಪ್ರಸ್ತಾಪಿಸಿ ದ್ದಾರೆ. ಈ ಪ್ರಸ್ತಾಪಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರು ಉತ್ತರ ಒದಗಿಸಿದ್ದು, ಈ ಬಗ್ಗೆ ಸಮರ್ಪಕ ಅರ್ಜಿ ವಿಲೇವಾರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಮ್ಮಾ ಮತ್ತು ಇತರ ಬಾಣೆ ಜಾಗಗಳಲ್ಲಿ ಕೃಷಿ ಮಾಡಿರುವ ಜಮೀನುಗಳಿಗೆ ಕಂದಾಯ ನಿಗದಿ ಮಾಡಲಾಗುತ್ತಿತ್ತು. ಹಾಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೨ (೨೦) ಮತ್ತು ಕಲಂ ೮೦ಕ್ಕೆ ತಿದ್ದುಪಡಿಯಾದಂತೆ ಜಿಲ್ಲೆಯಲ್ಲಿ ಮತ್ತು ಇತರೆ ಬಾಣೆ ಜಾಗಗಳಲ್ಲಿ ಕೃಷಿ ಮಾಡುತ್ತಿದ್ದರೂ, ಮಾಡುತ್ತಿಲ್ಲದಿದ್ದರೂ ಕಂದಾಯ ನಿಗದಿಪಡಿಸಲಾಗುತ್ತಿದೆ.
ಕಂದಾಯ ನಿಗದಿಗಾಗಿ ಸ್ವೀಕೃತವಾಗುವ ಅರ್ಜಿಗಳನ್ನು ಸಮರ್ಪಕವಾಗಿ ಹಾಗೂ ಕಾಲಮಿತಿಯೊಳಗೆ ವಿಲೇವಾರಿಗೊಳಿಸಲು ಉಪವಿಭಾಗಾಧಿಕಾರಿ ತಹಶೀಲ್ದಾರ್ ಮತ್ತು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.