ಕಣಿವೆ, ಡಿ. ೨೬: ವಿದ್ಯಾರ್ಥಿಗಳು ನಿಸರ್ಗ ಮತ್ತು ನಿಸರ್ಗದ ಮೇಲಾಗು ತ್ತಿರುವ ಮಾಲಿನ್ಯ ಹಾಗೂ ಅಪಾಯ ಗಳನ್ನು ತಪ್ಪಿಸುವ ಮೂಲಕ ಭವಿಷ್ಯ ದಲ್ಲಿ ಉತ್ತಮ ಪರಿಸರವನ್ನು ಸಂರಕ್ಷಿ ಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಘಟಕದ ಟಿ. ಜಿ. ಪ್ರೇಮಕುಮಾರ್ ಹೇಳಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತೊರೆನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ಅವಧಿಯ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು "ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ದೆಡೆಗೆ ಯುವ ಜನತೆ’’ ಎಂಬ ಧ್ಯೇಯದೊಂದಿಗೆ ‘‘ಪರಿಸರ ಸಂರಕ್ಷಣೆ ಯಲ್ಲಿ ಯುವಜನಾಂಗದ ಪಾತ್ರ’’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ನೆಲ, ಜಲ, ಗಾಳಿ ಕಲುಷಿತವಾಗದಂತೆ ಸಂರಕ್ಷಿಸ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಶಿಬಿರಾಧಿ ಕಾರಿ ಡಾ.ಸುನಿಲ್ ಕುಮಾರ್, ಉಪನ್ಯಾಸಕರಾದ ಡಾ. ಬಿ. ಡಿ. ಹರ್ಷ, ಉಪನ್ಯಾಸಕ ರಾಜು, ಹಿರಿಯ ವಿದ್ಯಾರ್ಥಿ ರಂಜು, ರಾಜೇಶ್, ಸ್ವಾಮಿ, ತೊರೆನೂರು ಸರ್ಕಾರಿ ಶಾಲೆಯ ಶಿಕ್ಷಕ ಎಚ್.ಎಸ್. ಯೋಗೇಶ್ ಇದ್ದರು. ಶಿಬಿರಾರ್ಥಿ ಆದಿತ್ಯ ನಿರೂಪಿಸಿ, ರೀಷ್ಮಾ ಸ್ವಾಗತಿಸಿ ದರು. ಚಿಂತನಾ ವಂದಿಸಿದರು.