ಸುಂಟಿಕೊಪ್ಪ, ಡಿ. ೨೬: ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ೫೩ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆಯು ತಾ. ೨೭ ರಂದು (ಇಂದು) ನಡೆಯಲಿದೆ.
ಪೂರ್ವಾಹ್ನ ೬.೪೫ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೭.೧೫ಕ್ಕೆ ಕನ್ನಿಮೂಲ ಗಣಪತಿಗೆ ಎಳನೀರು ಅಭಿಷೇಕ, ಪೂರ್ವಾಹ್ನ ೭.೩೦ ಗಂಟೆಗೆ ಚಂಡೆಮೇಳ, ೯ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ ಅಪರಾಹ್ನ ೧೨ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನದ ಪೂಜೆ, ೧೨.೩೦ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ - ಪಲ್ಲಪೂಜೆ, ೧೨.೪೫ಕ್ಕೆ ಗಂಭೀರ ಪಟಾಕಿ, ವಿಶೇಷ ಪೂಜೆ ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಚನೆ ೧೦ ರಿಂದ ೪ ರವರೆಗೆ ನಡೆಯಲಿದೆ.
ಸಂಜೆ ೭.೩೦ ಕ್ಕೆ ದುರ್ಗಾ ಪೂಜೆ ನಡೆಯಲಿದ್ದು, ಅನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀಪುರುಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿಶೇಷವಾಗಿ ೬.೩೦ ಗಂಟೆಗೆ ದೀಪಾರಾಧನೆ ಮತ್ತು ಮೆರವಣಿಗೆ, ೭.೩೦ಕ್ಕೆ ದುರ್ಗಾಪೂಜೆ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷÀ ಸುರೇಶ್ ಗೋಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎ. ಶ್ರೀಧರನ್, ಕೆ.ರವಿ, ಬಿ.ಎಲ್. ಆನಂದ, ಪ್ರಧಾನ ಕಾರ್ಯದರ್ಶಿ ಪಿ.ಲೋಕೇಶ್, ಖಜಾಂಚಿ ಬಿ.ಎಂ.ಸುರೇಶ್ (ಪುಟ್ಟ), ಸಹ ಕಾರ್ಯದರ್ಶಿ ಎಸ್. ರವಿ, ಎಸ್ .ಶಶಿಕಾಂತ್, ಸಂಘಟನಾ ಕಾರ್ಯದರ್ಶಿ ಪೃಥ್ವಿರಾಜ್, ಶೇಖರ್ (ಅಣ್ಣು), ಕೆ.ಕೆ.ವಾಸದೇವ, ಡಿ.ಕೆ.ರಾಕೇಶ್, ಎಂ.ಉದಯ, ಬಿ.ಕೆ.ರಂಜಿತ್, ಗೌರವಾಧ್ಯಕ್ಷ ಕೆ.ಎ.ಬಾಲಕೃಷ್ಣ, ಮುತ್ತಯ್ಯ, ಆರ್.ಟಿ.ಮೋಹನ, ಟಿ.ಜಿ.ರಾಧಾಕೃಷ್ಣ, ಸಲಹಾ ಸಮಿತಿ ಸದಸ್ಯರುಗಳಾಗಿ ವಿ.ಎ.ಸಂತೋಷ್, ಕೆ.ಪಿ.ವಿನೋದ್, ಎಂ.ಆರ್. ಶಿವಮಣಿ (ಶಿವರಾಂ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೆಚ್.ವಿ.ಆನಂದ, ಜಿ.ಎಸ್. ಗಣೇಶ್, ಜೀವನ್, ಬಿ.ಸಿ. ಪುರುಷೋತ್ತಮ್, ಎಂ.ರಾಜೇಶ್, ದೊರೆ ಇದ್ದರು.