ಕೂಡಿಗೆ, ಡಿ. ೨೭: ಐಕ್ಯೂಎಸಿ ಘಟಕ, ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ಹಾಗೂ ಆಪ್ಟಮ್ ಎಕ್ಸ್.ಎಲ್. ಹೆಲ್ತ್ ಕಂಪನಿಯ ಸಹಯೋಗದಲ್ಲಿ ನಡೆದ ‘ಕ್ಯಾಂಪಸ್ ಸೆಲೆಕ್ಷನ್’ನಲ್ಲಿ ಮೊದಲ ಹಂತಕ್ಕೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಸ್ನಾತ ಕೋತ್ತರ ಕೇಂದ್ರದ ವಿದ್ಯಾರ್ಥಿ ಗಳಿಗಾಗಿ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕ ಡಾ. ಕೆ.ಕೆ. ಧರ್ಮಪ್ಪ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಕ್ಯಾಂಪಸ್ನಲ್ಲಿ ನಡೆದಿರುವ ಉದ್ಯೋಗ ಮೇಳದ ಪ್ರಯೋಜನ ವನ್ನು ಪಡೆದುಕೊಂಡಿದ್ದಾರೆ. ಆಪ್ಪಮ್ ಕಂಪೆನಿಯ ಮೊದಲ ಹಂತವಾಗಿ ನಡೆದ ಮೆಡಿಕಲ್ ಕೋಡರ್ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಕೇಂದ್ರದ ವಿವಿಧ ವಿಭಾಗಗಳಿಂದ ನೂರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ, ಅದರಲ್ಲಿ ಸೂಕ್ಷಾö್ಮಣು ಜೀವ ವಿಜ್ಞಾನ, ಜೀವ ರಸಾಯನ ಶಾಸ್ತç ಹಾಗೂ ರಸಾಯನಶಾಸ್ತç ವಿಭಾಗದ ಸುಮಾರು ೩೭ ವಿದ್ಯಾರ್ಥಿಗಳು ಆಯ್ಕೆಗೊಂಡು ಎರಡನೇ ಹಂತದ ಆಯ್ಕೆ ಪ್ರಕ್ರಿಯೆ ಅಂಗವಾಗಿ ಸಂಸ್ಥೆಯಲ್ಲಿ ಸುಮಾರು ಐದು ವಾರಗಳಿಂದ ನಡೆದ ತರಬೇತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಇದರಿಂದ ಅವರ ಭವಿಷ್ಯ ಉಜ್ವಲವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿAದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅವಿರತ ಪ್ರಯತ್ನ ಮಾಡಲಾಗುವುದು ಎಂದು ನುಡಿದರು.
ಈ ಸಂದರ್ಭ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಐಕ್ಯೂಎಸಿ ಸಂಯೋಜಕರು ಮತ್ತು ಯೋಗ ವಿಜ್ಞಾನ ವಿಭಾಗದ ಸಂಯೋಜಕರು ಆದ ಡಾ. ಶ್ಯಾಮಸುಂದರ ಜೆ., ಸೂಕ್ಷಾö್ಮಣುಜೀವ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಗುಣಶ್ರೀ, ಎಸ್ಸಿ-ಎಸ್ಟಿ ಸೆಲ್ ಸಂಯೋಜಕ ರಾಜಕುಮಾರ್ ಎಸ್ ಮೇಟಿ, ಸಹಾಯಕ ಪ್ರಾಧ್ಯಾಪಕ ಡಾ. ಐ. ಕೆ. ಮಂಜುಳಾ, ಆಪ್ಟಮ್ ಕಂಪನಿಯಿAದ ತರಬೇತಿ ನೀಡಲು ಆಗಮಿಸಿದ್ದ ರಮಿಶಾ ಹೆಮನ್ ಹಾಗೂ ಸ್ನಾತಕೋತ್ತರ ಕೇಂದ್ರದಿAದ ಆಯ್ಕೆಯಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.