ಭಾಗಮಂಡಲ, ಡಿ. ೨೭: ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆ ಅರುಣ ಪ.ಪೂ. ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಅಂತರ ಗ್ರಾಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೊಸ್ಕೇರಿ ಗ್ರಾಮ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಇಂದು ನಡೆದ ಪಂದ್ಯಾಟದಲ್ಲಿ ಎಂಸಿಬಿ ಮದೆನಾಡು ತಂಡ ೫ ವಿಕೆಟ್‌ಗೆ ೧೧೩ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಾಟಕೇರಿ ಬ್ರರ‍್ಸ್ ತಂಡ ೫೮ ರನ್ ಗಳಿಸಿ ೫೫ ರನ್‌ಗಳ ಅಂತರದಿAದ ಸೋಲನುಭವಿಸಿತು.
ಟೀಂ ಚೇರಂಗಾಲ ತಂಡ ೮ ಓವರ್‌ಗಳಲ್ಲಿ ೧೬ ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡರೆ, ಹೊಸ್ಕೇರಿ ತಂಡ ೧೦ ವಿಕೆಟ್‌ಗಳ ಜಯ ಸಂಪಾದಿಸಿತು. ವೈಲ್ಡ್ ಮಾಸ್ರ‍್ಸ್ ತಂಡ ೧೨೭ ರನ್ ಗಳಿಸಿದರೆ, ಕೋಪಟ್ಟಿ ತಂಡ ೭೬ ರನ್ ಗಳಿಸಿ ೫೧ ರನ್‌ಗಳ ಅಂತರದಿAದ ಸೋಲನುಭವಿಸಿತು.
ಟೀಂ ಹೊಸ್ಕೇರಿ ತಂಡ ೮೫ ರನ್ ಗಳಿಸಿದರೆ, ಮದೆನಾಡು ತಂಡ ೭೩ ರನ್ ಗಳಿಸಿ ೧೨ ರನ್‌ಗಳ ಅಂತರದಿAದ ಸೋಲು ಕಂಡಿತು. ಕಟ್ಟೆಮಾಡು ತಂಡ ೭೪ ರನ್ ಗಳಿಸಿದರೆ, ವೈಲ್ಡ್ ಮಾಸ್ರ‍್ಸ್ ತಂಡ ೬ ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ವೈಲ್ಡ್ ಮಾಸ್ರ‍್ಸ್ ತಂಡ ೭೪ ರನ್ ಗಳಿಸಿದರೆ, ಟೀಂ ಹೊಸ್ಕೇರಿ ತಂಡ ೪ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. -ಸುನಿಲ್