ಮಡಿಕೇರಿ, ಡಿ. ೨೫: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಜಿಲ್ಲೆಯ ಹವಾಮಾನದಲ್ಲಿ ಮತ್ತೊಮ್ಮೆ ಬದಲಾವಣೆ ಕಂಡುಬAದಿದೆ. ಭಾನುವಾರದಂದು ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಲಕ್ಷಣ ಎದುರಾಗಿತ್ತು. ರಾಜ್ಯದ ಹಲವೆಡೆಗಳಲ್ಲಿ ಇನ್ನೂ ನಾಲ್ಕುದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇತರ ಕೆಲವು ಜಿಲ್ಲೆಗಳೊಂದಿಗೆ ಕೊಡಗಿನಲ್ಲಿಯೂ ಮಳೆಯಾಗುವ ಸಂಭವವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತದ ಕೃಷಿಯ ಅಂತಿಮ ಹಂತದ ಕುಯಿಲು ಕಾರ್ಯಗಳು ಸಾಗುತ್ತಿವೆ. ಇದರೊಂದಿಗೆ ಕಾಫಿ ಕುಯಿಲೂ ಆರಂಭಗೊAಡಿದ್ದು, ದಿಢೀರನೆ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ರೈತರು-ಬೆಳೆಗಾರರು ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.