ಭಾಗಮಂಡಲ, ಡಿ. ೨೫: ಒಂದು ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆದರೆ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಹೇಳಿದರು. ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮ ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾಟ ಹಾಗೂ ೨.೨ ಮತ್ತು ೧೨ ಬೋರ್ ಶೂಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮದಲ್ಲಿ ವಿವಿಧ ಬಗೆಯ ಪರಿಣತಿ ಹೊಂದಿದವರು ಇರುತ್ತಾರೆ. ಅಂತವರನ್ನು ಮುಂದೆ ತರುವಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ. ಕ್ರೀಡೆಗಳು ಪರಸ್ಪರ ಬಾಂಧವ್ಯ, ಸಹಕಾರ, ಒಗ್ಗಟ್ಟನ್ನು ಉಂಟು ಮಾಡುತ್ತವೆ ಎಂದರು. ಈ ವರ್ಷ ಪ್ರಥಮ ಬಾರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗು ವುದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರುಣ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಡನೋಳಂಡ ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಕ್ರೀಡೆಗೆ ವಿಶೇಷ ಸ್ಥಾನವಿದೆ. ಕ್ರೀಡೆಯಿಂದ ಸ್ಪೂರ್ತಿ ಸಿಗಲಿದೆ ಎಂದರು.

ಉಪನ್ಯಾಸಕ ದಾಯನ ರಾಮಕೃಷ್ಣ ಮಾತನಾಡಿ ಕ್ರೀಡೆಯಲ್ಲಿ ಶಿಸ್ತು, ಸಮಯ ಪಾಲನೆ ಅಗತ್ಯ. ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳು ವವರು ಎಚ್ಚರಿಕೆಯಿಂದ ಇರಬೇಕು ಎಂದರು. ಶೂಟಿಂಗ್ ಸ್ಪರ್ಧೆಯನ್ನು ಕೋರನ ಮೋಹನ್ ಅವರು ಉದ್ಘಾಟಿಸಿದರು. ಶೂಟಿಂಗ್ ಸ್ಪರ್ಧೆಯಲ್ಲಿ (ಮೊದಲ ಪುಟದಿಂದ) ರಾಜ್ಯ ಚಿನ್ನದ ಪದಕ ವಿಜೇತ ಬಳಪದ ವರುಣ್, ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮೋಹನ್, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಉಪಸ್ಥಿತರಿದ್ದರು.

ಮೊದಲಿಗೆ ಕ್ರಿಕೆಟ್ ಪಂದ್ಯಾವಳಿ ಕೊಡಗು ಯುವ ವೇದಿಕೆ ಮತ್ತು ಚೇರಂಬಾಣೆ ಗೌಡ ಸಮಾಜದ ನಡುವೆ ಪ್ರದರ್ಶನ ಪಂದ್ಯ ನಡೆದು ಗೌಡ ಯುವ ವೇದಿಕೆ ಜಯಗಳಿಸಿತು. ೨.೨ ಮತ್ತು ೧೨ ಬೋರ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ರಾಹುಲ್ ತಮ್ಮದಾಗಿಸಿಕೊಂಡರು. ನಾಳೆ ಗ್ರಾಮವಾರು ಕ್ರೀಡಾ ಪಂದ್ಯಾಟ ನಡೆಯಲಿದೆ.