ಸೋಮವಾರಪೇಟೆ, ಡಿ. ೨೫: ಪಟ್ಟಣದಿಂದ ಕುಂದಳ್ಳಿ ಮಾರ್ಗದ ಸಕಲೇಶಪುರ ರಾಜ್ಯಹೆದ್ದಾರಿಯ ಶಾಂತಳ್ಳಿ ಗ್ರಾಮದ ಹತ್ತಿರ ರಸ್ತೆಯಲ್ಲಿ ಎರಡು ಹೊಂಡಗಳು ಏರ್ಪಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಲ್ಲಳ್ಳಿ ಜಲಪಾತ ಹಾಗು ಪುಷ್ಪಗಿರಿಗೆ ತೆರಳುವ ಪ್ರವಾಸಿಗರ ನೂರಾರು ವಾಹನಗಳು ದಿನಂಪ್ರತಿ ಗುಂಡಿಯಲ್ಲೇ ಹಾದುಹೋಗಬೇಕಾಗಿದೆ. ತಿರುವಿನ ಅಪಾಯದ ಸ್ಥಳದಲ್ಲಿ ಹೊಂಡಗಳಿದ್ದು, ಎಚ್ಚರ ತಪ್ಪಿದರೆ ಅನಾಹುತ ಸಂಭವಿಸಲಿದೆ. ಲೋಕೋಪಯೋಗಿ ಇಲಾಖೆ ಕೂಡಲೆ ಗುಂಡಿಯನ್ನು ಮುಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.