ಮಡಿಕೇರಿ, ಡಿ. ೨೫: ಪಾಣತ್ತೂರು ಶ್ರೀ ಅಯ್ಯಪ್ಪ ಸ್ವಾಮಿ ಮಹೋತ್ಸವದ ಅಂಗವಾಗಿ ಕರಿಕೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಮೆರವಣಿಗೆ ನಡೆಯಿತು.
ಸ್ವಾಮಿ ಅಯ್ಯಪ್ಪನ ಭಜನೆ ಮತ್ತು ಚಂಡೆ ವಾದ್ಯದೊಂದಿಗೆ ಸಾಗಿದ ಮೆರವಣಿಗೆ ಶ್ರದ್ಧಾಭಕ್ತಿಯಿಂದ ಕೊನೆ ಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಭಕ್ತರು ಮಹಾಮಂಗಳಾರತಿ, ಪ್ರಸಾದ ಸ್ವೀಕರಿಸಿದರು.
ಮೆರವಣಿಗೆಯಲ್ಲಿದ್ದವರಿಗೆ ಕರಿಕೆ ತೋಟಂ ಮುಸ್ಲಿಮ್ ಜಮಾಅತ್ ವತಿಯಿಂದ ಸಿಹಿ ಮತ್ತು ನೀರನ್ನು ವಿತರಿಸಲಾಯಿತು.