ಮಡಿಕೇರಿ, ಡಿ. ೨೪: ಚೀನಾ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲೂ ಕೆಲ ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಕೇಂದ್ರ ಸರಕಾರ ಮನವಿ ಮಾಡಿದೆ. ರಾಜ್ಯ ಸರಕಾರವು ನಿನ್ನೆಯಷ್ಟೆ ಈ ಸಂಬAಧ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಒಳಾಂಗಣಗಳಲ್ಲಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದೆ. ಇದರೊಂದಿಗೆ ಈಗಾಗಲೇ ಕೋವಿಡ್ ನಿರೋಧಕ ಲಸಿಕೆಯ ೧ನೇ ಹಾಗೂ ೨ನೇ ಡೋಸ್ ಪಡೆದವರು ಬೂಸ್ಟರ್ ಡೋಸ್ ಪಡೆಯುವಂತೆ ಕೋರಿದೆ. ಕೊಡಗು ಜಿಲ್ಲೆಯಲ್ಲಿ ೨ನೇ ಡೋಸ್ ಲಸಿಕೆಯನ್ನು ಪಡೆದು ೬ ತಿಂಗಳುಗಳು ಕಳೆದಿರುವ ೧೮ ವರ್ಷ ಮೇಲ್ಪಟ್ಟ ಒಟ್ಟು ೪೨,೨೧೪ ಮಂದಿ ಬೂಸ್ಟರ್ ಡೋಸ್ ಪಡೆಯಲು ಬಾಕಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ೧೫ ರಿಂದ ೧೮ ವರ್ಷ ವಯೋಮಿತಿಯಲ್ಲಿ ೨ ವರಸೆ ಲಸಿಕೆ ಪಡೆದವರ ಪೈಕಿ ೮೫೮ ಫಲಾನುಭವಿಗಳು ೩ನೇ ವರಸೆ ಅಥವಾ ಬೂಸ್ಟರ್ ಡೋಸ್ ಪಡೆಯಲು ಬಾಕಿ ಇದ್ದಾರೆ. ಆದಷ್ಟು ಶೀಘ್ರದಲ್ಲಿ ಲಸಿಕೆ ಪಡೆÀಯದವರು ಲಸಿಕೆ ಪಡೆಯುವಂತೆ ಪ್ರಕಟಣೆ ಕೋರಿದೆ.

ಇದೀಗ ಕೊಡಗಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಇದ್ದು, ಒಟ್ಟು ೫,೨೦೦ ಲಸಿಕಾ ಡೋಸ್‌ಗಳು ಲಭ್ಯವಿರುವುದಾಗಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಗೋಪಿನಾಥ್ ಸುರೇಶ್ ಅವರು ಮಾಹಿತಿ ನೀಡಿದ್ದಾರೆ.