ಶ್ರೀಮಂಗಲ, ಡಿ. ೨೫: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೊರಾಡು ಗ್ರಾಮದ ಬೆಂಗಳೂರು ಹೈಕೋರ್ಟ್ ವಕೀಲ ಅಣ್ಣೀರ ಪ್ರಭು ಪೂವಯ್ಯ ಮತ್ತು ಪತ್ನಿ ಕವಿತಾ ಅವರು ಕಂಪ್ಯೂಟರ್ ಹಾಗೂ ರೂ.೧೫ ಸಾವಿರ ನಗದನ್ನು ಮುಖ್ಯ ಶಿಕ್ಷಕಿ ಜಯಮ್ಮ ಅವರಿಗೆ ಹಸ್ತಾಂತರಿಸಿದರು. ಪ್ರಭು ಪೂವಯ್ಯ ಅವರು ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಈ ಸಂದರ್ಭ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಬಲ್ಯಮೀದೇರಿರ ಸಂಪತ್ ಹಾಜರಿದ್ದರು.