*ಗೋಣಿಕೊಪ್ಪ, ಡಿ. ೨೫: ಕಾಲ್ನಡಿಗೆಯಲ್ಲಿ ಶಬರಿಮಲೆ ಯಾತ್ರೆಗೆ ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಉಪಾಧ್ಯಕ್ಷ ವಿ.ಸಿ. ಪ್ರದೀಪ್ ಹಾಗೂ ಸಂಗಡಿಗರು ಪಾದಯಾತ್ರೆಗೆ ಮುಂದಾಗಿದ್ದಾರೆ.

ಹಿರುಮುಡಿ ಕಟ್ಟು ತುಂಬಿಸಿ ತಲೆಯಲ್ಲಿ ಹಿರುಮುಡಿ ಇಟ್ಟು ಹೊರಟ ಅಯ್ಯಪ್ಪ ಸ್ವಾಮಿ ಭಕ್ತರು ಗೋಣಿಕೊಪ್ಪದಿಂದ ಶಬರಿಮಲೆವರೆಗೆ ಸುಮಾರು ೪೪೨ ಕಿ.ಮೀ. ೪ ದಿನಗಳಲ್ಲಿ ತಲುಪಲಿದ್ದಾರೆ.