ಸುಂಟಿಕೊಪ್ಪ, ಡಿ. ೨೫: ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಕಲಿಕೆಯ ಕಡೆಗೆ ಗಮನಹರಿಸಬೇಕು ಎಂದು ಕೂಡಿಗೆ ಡಯಟ್‌ನ ಉಪಪ್ರಾಂಶುಪಾಲರಾದ ಶಿವಕುಮಾರ್ ಸಲಹೆ ನೀಡಿದರು.

ಸುಂಟಿಕೊಪ್ಪ ನಾಡು ಪ್ರೌಢಶಾಲೆ, ಕೊಡಗರಹಳ್ಳಿಯ ೫೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಈಗಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯ ಲಭಿಸುತ್ತಿದೆ. ಅದನ್ನು ಸದುಪಯೋಗ ಪಡಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರು, ವ್ಯವಸ್ಥಾಪಕ ಹೊನ್ನಂಪಾಡಿ ಅಂಕಿತ ಸುರೇಶ್ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಗಳಲ್ಲಿ ಅಸಕ್ತಿಯಿಂದ ಭಾಗವಹಿಸುವು ದರೊಂದಿಗೆ ಕ್ರೀಡಾ ಚಟುವಟಿಕೆ ಗಳಲ್ಲೂ ಶ್ರದ್ಧೆಯಿಂದ ಭಾಗವಹಿಸಿದರೆ ಬದುಕನ್ನು ಉಜ್ವಲಗೊಳಿಸಬಹುದು ಎಂದು ಹೇಳಿದರು. ಶಾಲೆಯ ಹಳೆ ವಿದ್ಯಾರ್ಥಿ ಮಡಿಕೇರಿ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಅಕ್ಕಪಂಡ ಬಿ. ತಮ್ಮಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು, ವಿದ್ಯೆಯ ಕಡೆ ಆಸಕ್ತಿ ವಹಿಸಬೇಕು ಎಂದರು. ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್. ಮಂಜು ನಾಥ್ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಓದಿ ಶಾಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ, ಕೂಡಿಗೆ ಡಂiÀiಟ್ ಉಪನ್ಯಾಸಕಿ ಗಾಯತ್ರಿದೇವಿ, ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕುಟ್ಟಪ್ಪ, ಸದಸ್ಯರುಗಳಾದ ಲಕ್ಷಿö್ಮ ನಾರಾಯಣ, ಅರುಣ ಬಂಗೇರ, ವಲಯ ಸಂಪನ್ಮೂಲ ಅಧಿಕಾರಿ ಎಂ.ಸಿ.ಸೀಮ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ, ಸಹ ಶಿಕ್ಷಕರುಗಳಾದ ದಿನೇಶ್, ಆಡ್ಮಣಿ, ಗುರುಕ್ಕಿ, ಶೋಭಾ, ಮತ್ತಿತರರು ಇದ್ದರು.