ಮಡಿಕೇರಿ, ಡಿ. ೨೪ : ಕೊಡಗು ಜಿಲ್ಲೆ ನೆರೆಯ ಕೇರಳಕ್ಕೆ ಹೊಂದಿಕೊAಡAತೆ ಗಡಿ ಭಾಗದ ಜಿಲ್ಲೆಯಾಗಿದೆ. ದಿನನಿತ್ಯ ಕೊಡಗಿನಿಂದ ಅಕ್ರಮವಾಗಿ ಗೋವುಗಳು, ಮರಗಳ ಸಾಗಾಟ ಸಾಮಾನ್ಯವಾಗಿದೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಅಧಿಕೃತವಾಗಿ ಸರಕಾರದ ಅನುಮತಿಯೊಂದಿಗೆ ಮರದ ದಿಮ್ಮಿಗಳನ್ನು ಸಾಗಾಟ ಮಾಡಬಹುದಾಗಿದೆ. ಆದರೆ., ಯಾವದೇ ಕಾರಣಕ್ಕೂ ಆಂತರಿಕ ಬಳಕೆಯ ಸೌದೆಗಳನ್ನು ಸಾಗಾಟ ಮಾಡುವಂತಿಲ್ಲ. ಆದರೆ., ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖಾ ಅಧಿಕಾರಿಯೋರ್ವರ ಕೃಪಾ ಕಟಾಕ್ಷದಿಂದ ಸೌದೆಯನ್ನು ಕೂಡ ಕೇರಳಕ್ಕೆ ಸಾಗಾಟ ಮಾಡಲಾಗಿದೆ..!

ಮದೆ ಗ್ರಾಮ ಪಂಚಾಯ್ತಿಯ ಆರ್.ಹೆಚ್. ಗಣಪತಿ ಎಂಬವರಿಗೆ ಸೇರಿದ ಜಾಗದಿಂದ ಕಡಿಯಲಾದ ಮರದ ದಿಮ್ಮಿಗಳನ್ನು ಸಾಗಾಟ ಮಾಡಲು ಅರಣ್ಯ ಇಲಾಖೆಗೆ ರಹದಾರಿ ಅನುಮತಿ ಕೋರಿದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಪಿ.ಜೆ. ರಾಘವ ಅವರು ಕೇರಳದ ಕೊಟ್ಟಾಯಂ ಜಿಲ್ಲೆಗೆ ಲಾರಿ (ಕೆ.ಎಲ್.೫೬- ಕೆ-೯೧೫)ಯಲ್ಲಿ ‘ಮಾವು ಫೈಯರ್ ವುಡ್’ಎಂದು ನಮೂದಿಸಿ ರಹದಾರಿ ನೀಡಿದ್ದಾರೆ. ನಂತರ ಅದನ್ನು ತಿದ್ದುಪಡಿ ಮಾಡಿ ‘ಮಾವು ಟಿಂಬರ್ ವುಡ್’ ಎಂದು ನಮೂದಿಸಿ ರಹದಾರಿ ನೀಡಿದ್ದಾರೆ.

ನಂತರ ಮತ್ತೊಂದು ರಹದಾರಿಯಲ್ಲಿ ಕೇರಳದ ಮಂಜೇರಿಗೆ ಲಾರಿ(ಕೆ.ಎ.೨೧-ಎ-೪೨೫೫)ಗೆ ‘ಫೈಯರ್ ವುಡ್’ ಎಂದೇ ಅನುಮತಿ ನೀಡಲಾಗಿದೆ.

(ಮೊದಲ ಪುಟದಿಂದ) ಮೂಲ ದಾಖಲೆಯನ್ನು ತಿದ್ದುಪಡಿ ಮಾಡಿ ಕೇರಳ ಗಡಿಯ ಕುಟ್ಟ ಗ್ರಾಮದ ಚೆಕ್‌ಪೋಸ್ಟ್ನಲ್ಲಿ ನೀಡಲಾಗಿರುವ ರಹದಾರಿಯನ್ನು ತನಿಖಾಧಿಕಾರಿಗಳಾಗಿದ್ದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಸಂಗ್ರಹ ಮಾಡಿ ಇಲಾಖೆಗೆ ನೀಡಿದ್ದಾರೆ.

ಕೇರಳಕ್ಕೆ ಸೌದೆ ಸಾಗಾಟಕ್ಕೆ ಅವಕಾಶವಿಲ್ಲದಿದ್ದರೂ ರಹದಾರಿಯಲ್ಲಿ ಅನುಮತಿ ನೀಡಿರುವದು ಅರಣ್ಯ ಇಲಾಖೆ ಹಾಗೂ ಸರಕಾರಕ್ಕೆ ಮಾಡಿರುವ ವಂಚನೆಯಾಗಿದೆ. ಅಲ್ಲದೆ, ಸರಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿರುವದು ಕ್ರಿಮಿನಲ್ ಅಪರಾಧವಾಗಿದ್ದರೂ ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಇದುವರೆಗೂ ಕ್ರಮ ಕೈಗೊಳ್ಳದಿರುವದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ..!

? ಸಂತೋಷ್