ಕ್ರಿಸ್‌ಮಸ್ ಬಂದಿದೆ. ಇಡೀಯ ಜಗತ್ತೇ ಸಂಭ್ರಮಿಸುತ್ತಿದೆ, ಸಂತೋಷಿಸುತ್ತಿದೆ. ಪ್ರತಿ ವರ್ಷವು ಕ್ರಿಸ್‌ಮಸ್ ಹಬ್ಬವು ವರ್ಷದ ಕೊನೆಯ ತಿಂಗಳ ಡಿಸೆಂಬರ್ ೨೫ ರಂದು ಬರುವ ಹಬ್ಬವಾಗಿದೆ. ಕೊರೆಯುವ ಚುಮುಚುಮು ಚಳಿಯಲ್ಲಿ ಸಡಗರ ಸಂಭ್ರಮದಿAದ ಆಚರಿಸಲ್ಪಡುವ ಬೆಳಕಿನ ಹಬ್ಬ. ಇದು ೧ ದಿನದ ಹಬ್ಬವಲ್ಲ, ತಿಂಗಳು ಪೂರ್ತಿ ಆಚರಿಸಲ್ಪಡುವ ಹಬ್ಬ ವಾಗಿರುತ್ತದೆ. ಜಗತ್ತಿನ ಎಲ್ಲಾ ಚರ್ಚ್, ದೇವಾಲಯಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟು ಪ್ರಕಾಶಮಾನವಾದ ಬೆಳಕಿನ ಕಿರಣಗಳಿಂದ ಕಂಗೊಳಿಸುತ್ತವೆ. ಎಲ್ಲೆಲ್ಲೂ ಕ್ರಿಸ್‌ಮಸ್ ಗಾಯನ ಸಂಗೀತ ಸ್ಪರ್ಧೆ ತಂಡ ಗಳೊಂದಿಗೆ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಏಸುಕ್ರಿಸ್ತನ ಜನನದ ಶುಭವಾರ್ತೆಯನ್ನು ಹಾಡಿ ಹೊಗಳುತ್ತಾ, ನರ್ತಿಸುತ್ತಾ ಮನೆ-ಮನೆಗಳಿಗೆ ತೆರಳುತ್ತಾರೆ. ವಿಶೇಷ ಕ್ರಿಸ್‌ಮಸ್‌ನ ವಿಶೇಷ ಉಡುಗೊರೆ ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಜಗತ್ತಿನ ಎಲ್ಲಾ ಚರ್ಚ್ಗಳಲ್ಲಿ, ಕ್ರಿಸ್‌ಮಸ್ ದಿನದಂದು ಆರಾಧನೆ, ಪ್ರಾರ್ಥನೆ ಬೈಬಲ್ ವಾಕ್ಯದ ಸಂದೇಶಗಳು ನಡೆಸಲ್ಪಡುತ್ತವೆ, ಜಗತ್ತಿನ ಎಲ್ಲಾ ಚರ್ಚ್ಗಳಿಂದ ಇಂಪಾದ ಗಂಟೆಯ ನಾದವನ್ನು ಕೇಳಬಹುದು. ವಿಶೇಷವಾಗಿ ಎಲ್ಲಾ ಕ್ರೆöÊಸ್ತರ ಮನೆಗಳ ಮುಂದೆ ಬಣ್ಣ-ಬಣ್ಣದ ನಕ್ಷತ್ರಗಳು ಬೆಳಕಿನ ಕಿರಣಗಳಿಂದ ಪ್ರಕಾಶಿಸುತ್ತಾ ಮಿನುಗುತ್ತಿರುವುದನ್ನು ನೋಡಬಹುದು. ಕ್ರಿಸ್ತನ ಜನನದ ಸಂಕೇತವಾದ ಹುಲ್ಲಿನ ಗೋದಲಿ ಅಲಂಕರಿಸಲ್ಪಟ್ಟು ಕÀಂಗೊಳಿಸುವ ಕ್ರಿಸ್‌ಮಸ್ (ಟ್ರಿ ) ಇದರೊಂದಿಗೆ ಮಕ್ಕಳನ್ನು ರಂಜಿಸಲು ಸಾಂತಕ್ರಾಸ್ತನ ಆಗಮನವನ್ನು ಕಾಣಬಹುದು. ಹೀಗೇ ಇಡೀ ಜಗತ್ತೇ ಶೃಂಗಾರಗೊAಡು ದೀಪ ಅಲಂಕಾರಗಳಿAದ ಕಂಗೊಳಿಸುತ್ತಾ ಸರ್ವರನ್ನ ಪ್ರೀತಿ ವಾತ್ಸಲ್ಯದಿಂದ ಕ್ರಿಸ್ತನ ಶಾಂತಿ ಸಮಾಧಾನದ ಐಕ್ಯತೆಯ ಶುಭ ಸಂದೇಶವನ್ನು ಜಗತ್ತಿಗೆ ಸಾರಿ ಹೇಳುವ ಹಬ್ಬವೇ ಕ್ರಿಸ್ತ ಜಯಂತಿ ಹಬ್ಬ.
ಕ್ರಿಸ್‌ಮಸ್ ಹಬ್ಬದ ವಿಶೇಷ ಕೇಕುಗಳು, ಸಿಹಿ ತಿಂಡಿಗಳು ಮನೆಯಲ್ಲಿ ಸಿದ್ಧಪಡಿಸುವ ವಿಧವಿಧದ ತಿಂಡಿಗಳು, ಕರ್ಜೂರದ ಹಣ್ಣುಗಳು, ನೇಂದ್ರಬಾಳೆ, ಕಿತ್ತಳೆ ಹಣ್ಣು, ಮನೆಯಲ್ಲಿಯೇ ತಯಾರಿಸಿದ ವೈನ್ ಇತ್ಯಾದಿಗಳು. ಯೇಸು ಕ್ರಿಸ್ತನು ಜನಿಸಿದಾಗ ಆಕಾಶದಲ್ಲಿ ಒಂದು ಪ್ರಕಾಶಮಾನವಾದ ನಕ್ಷತ್ರವು ಗೋಚರಿಸುತ್ತದೆ. ಮೂಡಣ ದೇಶದ ಜೋಯಿಸರು ಈ ವಿಶೇಷವಾದ ನಕ್ಷತ್ರವನ್ನು ನೋಡಿ ಆಶ್ಚರ್ಯಪಡುತ್ತಾರೆ.
ಅವರು ಮೂಡಣ ದೇಶದಿಂದ ಯೂದಾಯ ಸೀಮೆಯ ಬೆತ್ಲೆಹೇಮ್ ಹಳ್ಳಿಗೆ ಬರುತ್ತಾರೆ. ಅರಸನಾದ ಹೆರೋದನ ಆಡಳಿತದ ಆ ದಿನಗಳಲ್ಲಿ ಯೂದಾಯ ಸೀಮೆಯ ಬೆತ್ಲೆಹೇಮ್ ಎಂಬ ಹಳ್ಳಿಯಲ್ಲಿ ಏಸುಕ್ರಿಸ್ತನು ಜನಿಸಿದ ಸುದ್ದಿ ಅರಸನಾದ ಹೆರೋದನಿಗೆ ತಿಳಿದು ಬರುತ್ತದೆ. ಕ್ರಿಸ್ತನ ಜನನದ ವಾರ್ತೆಯನ್ನು ಕೇಳಿ ಮಹಾ ಯಾಜಕರು, ಶಾಸ್ತಿçಗಳು ಯೂರೋಸಲೇನಿನ ಜನರು ಕಳವಳ ಪಡುತ್ತಾರೆ. ಅರಸನಾದ ಹೆರೋದನು ಯಾಜಕರನ್ನು, ಶಾಸ್ತಿçಗಳನ್ನು ಸೇರಿಸಿ ಕ್ರಿಸ್ತನು ಹುಟ್ಟಬೇಕಾಗಿದ್ದು, ಎಲ್ಲಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಅವರೆಲ್ಲರೂ ಹೀಗೆ ಉತ್ತರಿಸುತ್ತಾರೆ. ‘‘ದೇವರ ಕುಮಾರನು ರಾಜಾಧಿರಾಜನು ಮಹಾ ಅಧಿಪತಿಯು ಹುಟ್ಟಬೇಕಾದದ್ದು ಬೆತ್ಲೆಹೇಮ್‌ನಲ್ಲಿಯೇ ಎಂಬುವುದಾಗಿ, ಇದನ್ನು ಕೇಳಿದ ಅರಸನಾದ ಹೆರೋದನ್ನು ಅಸೂಯೇ ಪಡುತ್ತಾನೆ. ಜೋತಿಷ್ಯರೊಂದಿಗೆ ವಂಚನೆಯ ಮಾತನಾಡುತ್ತಾನೆ. ನೀವು ಏಸು ಕಂದನನ್ನು ನೋಡಿದ ನಂತರ ಬಂದು ನನಗೆ ತಿಳಿಸಿ. ನಾನು ಬಂದು ಆ ಕಂದನಿಗೆ ಅಡ್ಡ ಬೀಳಬೇಕು ಎಂಬುವುದಾಗಿ ತಿಳಿಸುತ್ತಾನೆ. ಜೋತಿಷ್ಯರು ಬೆತ್ಲೆಹೇಮ್‌ನಲ್ಲಿ ಕ್ರಿಸ್ತನು ಜನಿಸಿದ ಸ್ಥಳಕ್ಕೆ ಹೋಗಿ ಆ ಮಗುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಚಿನ್ನ, ದೂಪ, ರಕ್ತ ಬೋಳಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಜೋತಿಷ್ಯರಿಗೆ ದೇವರ ದರ್ಶನದ ವಾರ್ತೆಯಾಗಿ ತಿರುಗಿ ಅವರು ಆ ಮಾರ್ಗವಾಗಿ ಹಿಂದಿರುಗದೆ ಬೇರೆ ಮಾರ್ಗವಾಗಿ ಮೂಡಣ ದೇಶಕ್ಕೆ ಹೋಗುತ್ತಾರೆ. ಇದನ್ನು ತಿಳಿದು ಹೆರೋದ ರಾಜನಿಗೆ ಕೋಪ ಬರುತ್ತದೆ. ಅರಸನು ತನ್ನ ಸೈನಿಕರನ್ನು ಕರೆಯಿಸಿ ಬೆತ್ಲೆಹೇಮ್ ಸುತ್ತಲಿನ ಎಲ್ಲಾ ಪುಟ್ಟ ಮಕ್ಕಳನ್ನು ಕೊಲ್ಲಿಸುತ್ತಾನೆ. ಆದರೆ ಜೋಸೇಫ್ ಮತ್ತು ಮೇರಿಯು ದೇವರ ವಾಣಿಯಂತೆ ಬೆತ್ಲೆಹೇಮ್ ಹಳ್ಳಿಯಿಂದ ಐಗುಪ್ರದೇಶಕ್ಕೆ ಹೋಗಿ ಅಲ್ಲಿ ಸ್ವಲ್ಪ ಕಾಲ ನೆಲೆಸುತ್ತಾರೆ. ಅರಸನಾದ ಹೇರೋದನ ಮರಣದ ನಂತರ ತಮ್ಮ ಊರಿಗೆ ಬರುತ್ತಾರೆ. (ಬೈಬಲ್ ಉಲ್ಲೇಖದಿಂದ)
ಏಸುಕ್ರಿಸ್ತನ ಜನನದ ಸಮಯದಲ್ಲಿ ನಡೆದ ಈ ಘಟನೆಯಿಂದ ನಾವು ತಿಳಿಯಬೇಕಾದುದ್ದು ಭೂಮಿಯ ಮೇಲೆ ೨,೦೦೦ ವರ್ಷಗಳ ಹಿಂದೆಯೇ ಅಸೂಯೆ ಮತ್ತು ಘೋರ ಹಿಂಸೆ ಅಧಿಕಾರ ನಡೆಸುತ್ತಿತ್ತು ಎಂಬುವುದಾಗಿ, ಈ ದಿನಗಳಲ್ಲಿ ಜಗತ್ತಿನ ಕಡೆಗೆ ನಾವೆಲ್ಲರೂ ನೋಡುವುದಾದರೆ ಇಡೀ ಜಗತ್ತಿನ ಎಲ್ಲೆಡೆ ಹಿಂಸೆ ಹಾಗೂ ದುಷ್ಟ ಶಕ್ತಿಗಳ ಕಾರ್ಗತ್ತಲೆ ಭೂಮಿಯನ್ನು ಆವರಿಸಿಕೊಂಡAತಿದೆ. ಮಾನವರು ಪ್ರಕೃತಿಗೆ ವಿರೋಧವಾಗಿ ನಡೆದುಕೊಳ್ಳುತ್ತಿ ದ್ದಾರೆ. ದೇವರ ಚಿತ್ತಕ್ಕೆ ವಿರೋಧವಾದುದನ್ನು ಮಾಡುತ್ತಿದ್ದಾರೆ. ದೇವರು ಮನುಷ್ಯನನ್ನು ಭೂಮಿಯ ಮೇಲೆ ಸೃಷ್ಟಿಸಿದ್ದನ್ನು ನೆನೆದು ಪಶ್ಚಾತ್ತಾಪ ಪಡುವಂತಾಗಿದೆ. ಮಾನವರು ದೇವರ ಕೋಪವನ್ನು ಪ್ರಕೃತಿ ವಿಕೋಪಗಳ ಮೂಲಕ ಅನುಭವಿಸುತ್ತಿರುವದು ಗೋಚರವಾಗುತ್ತಿದೆ. ಜನತೆ ದೇವರ ಆಲೋಚನೆಗಳಿಗೆ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರು ವಂತೆ ಅನಿಸುತ್ತಿದೆ. ನಾವೆಲ್ಲರೂ ಮಾನವೀಯತೆಯನ್ನು ಮರೆತು ಬೆಳಕಿನ ಜೀವಿತದಿಂದ ಮರೆಯಾಗಿ ದೇವರಿಂದ ಆತಿದೂರವಾಗಿ ಇದ್ದೇವೆಯೇನೋ ದೇವರು ಬೆಳಕಾಗಿದ್ದಾನೆ. ದೇವರು ಕೆಟ್ಟದನ್ನು ಸಹಿಸುವವನಲ್ಲ. ನೀವು ಲೋಕಕ್ಕೆ ಬೆಳಕಾಗಿದ್ದೀರಿ, ನೀವು ಭೂಮಿಗೆ ಉಪಾಗಿದ್ದೀರಿ ಎಂಬುವುದೇ ಏಸುಕ್ರಿಸ್ತರ ದಿವ್ಯ ಸಂದೇಶವಾಗಿದೆ. ನಾವೆಲ್ಲರೂ ಬೆಳಕಾಗಿ ಬಾಳಬೇಕೆಂಬು ವುದೇ ದೇವರ ಉದ್ದೇಶವಾಗಿದೆ. ಜಗತ್ತಿನಲ್ಲಿ ಹೆಚ್ಚಿನವರು ಗಂಡಾAತÀರ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಭೂಮಿಯ ಮೇಲೆ ಒಂದಲ್ಲ, ಒಂದು ಕಡೆ ಜನರು ಭೀಕರ ರೋಗ ಭಾದೆಗಳಯ, ಅವಘಡಗಳು, ಪ್ರಕೃತಿ ವಿಕೋಪಗಳು, ಬಿರುಗಾಳಿ, ಸುನಾಮಿಗಳನ್ನು, ಭೀಕರ ಭೂಕಂಪ ಬೆಂಕಿ ನೀರಿನ ಆಪತ್ತುಗಳಿಂದ ತತ್ತರಿಸಿ ಹೋಗುತ್ತಿದ್ದಾರೆ. ಜನರು ಸಮಾಧಾನ ವಿಲ್ಲದೆ, ಭಯದಿಂದ ದುಃಖದಿಂದ, ಜೀವಿಸುವ ದಿನಗಳು ಎದುರಾಗಿವೆ. ಎಲ್ಲವನ್ನು ಗಮನಿಸುವಾಗ ನಮ್ಮ ಭೂ ಯಾತ್ರೆಯ ಕ್ಷಣಿಕ ಜೀವಿತವನ್ನು ನಾವೆಲ್ಲರೂ ಮರೆತಂತೆ ಅನಿಸುತ್ತದೆ. ವರ್ಷದ ಕೊನೆಯಲ್ಲಿ ಕ್ರಿಸ್‌ಮಸ್ ಹಬ್ಬ ಬಂದಿದೆ. ಕ್ರಿಸ್ತನ ಜನನದ ಸಂಕೇತವಾದ, ನಕ್ಷತ್ರದ ಬೆಳಕು ಮನೆಯ ಮುಂದೆ ಪ್ರಕಾಶಿಸುತ್ತಿದೆ. ನಮ್ಮ ಮನೆಯ ಒಳಗೆ ಬೆಳಕಿದ್ದರೂ ನಮ್ಮ ಮನಸಿನ ಪುಟ್ಟ ಹೃದಯವೆಂಬ ನಕ್ಷತ್ರದಲ್ಲಿ ಸಮಾಧಾನ ಸಂತೋಷದ ಬೆಳಕು ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ನಮ್ಮೆಲ್ಲರ ಜೀವನವು ಸ್ನೇಹ, ದಯ, ಕರುಣೆ ಇಲ್ಲದ, ಕ್ಷಮೆ ಇಲ್ಲದ ಪ್ರೀತಿಯ ಅನ್ಯೋನ್ಯತೆಯ ಸಹಬಾಳ್ವೆ ಇಲ್ಲದ ಜೀವನವಾಗಿದೆ. ಆದುದರಿಂದ ನಾವೆಲ್ಲರೂ ಕ್ರಿಸ್‌ಮಸ್ ಹಬ್ಬದ ಈ ಶುಭ ದಿನದಲ್ಲಿ ಕ್ರೆöÊಸ್ತಬಾಂಧವರು ತಮ್ಮ ಮನೆಯ ಮುಂದೆ ತೂಗು ಹಾಕಿರುವ ಕೃತಕ ನಕ್ಷತ್ರದ ಅರ್ಥವನ್ನು ತಿಳಿದುಕೊಳ್ಳಬೇಕಾಗುತ್ತದೆ. ಬಣ್ಣ-ಬಣ್ಣದ ಬೆಳಕಿನಿಂದ ಮಿನುಗುತ್ತಿರುವ ನಕ್ಷತ್ರಗಳಂತೆ ದೇವರು ನಮ್ಮೆಲ್ಲರಿಗೆ ಅಂದವಾದ, ಸುಂದರವಾದ ರೂಪವನ್ನು ಕೊಟ್ಟು ಶ್ರೇಷ್ಠ ಜ್ಞಾನ ಬುದ್ಧಿ, ಬಲವನ್ನು ಅಧಿಕಾರ ಸ್ಥಾನ ಮಾನವನ್ನು ಆಸ್ತಿ ಐಶ್ವರ್ಯ ಗಳನ್ನು ದಯಪಾಲಿಸಿ ಸಮಸ್ತ ಜೀವಿಗಳಿಗಿಂತಲೂ ಉತ್ತಮವಾದ ಜೀವಿತವನ್ನು ನಮ್ಮೆಲ್ಲರಿಗೂ ಅನುಗ್ರಹಿಸಿರುತ್ತಾನೆ. ಆದರೆ ದೇವರು ನಮ್ಮೆಲ್ಲರಿಗೂ ಕೊಟ್ಟಿರುವ ಸುಂದರ ಶ್ರೇಷ್ಠ ಬದುಕನ್ನೇ ಮರೆತು ದೇವರಿಗೆ ವಿರುದ್ಧವಾಗಿ, ನಮ್ಮ ಮನಸಾಕ್ಷಿಗೆ ವಿರುದ್ಧವಾಗಿ ಕತ್ತಲೆಯಲ್ಲಿ ಜೀವಿಸುತ್ತಿದ್ದೇವೆ.
ಈ ಲೋಕದ ಸಡಗರ ಸಂಭ್ರಮದ ವೈಭವದ ಸನ್ಮಾನಗಳ ಬೆಳಕಿನಲ್ಲಿಯೇ ನಾವೆಲ್ಲರೂ ಪ್ರಕಾಶಿಸುತ್ತಿದ್ದೇವೆ. ದೇವರ ಆತ್ಮೀಯ ಬೆಳಕಿನಿಂದ ನಾವೆಲ್ಲರೂ ಮರೆಯಾದಂತೆ ಅನಿಸುತ್ತದೆ. ಆದುದರಿಂದ ನಮ್ಮ ಆಚಾರ, ಆರಾಧನೆ, ಸಂಸ್ಕೃತಿ, ಪೂಜೆ, ನಿಯಮ ನಿಷ್ಠೆಗಳೊಂದಿಗೆ, ನಮ್ಮೆಲ್ಲರ ಮನಸ್ಸಿನ ಭಾವನೆಗಳನ್ನು ಪರೀಕ್ಷಿಸಿಕೊಂಡು ನಮ್ಮ ಜೀವನದಲ್ಲಿ ನಮ್ಮನ್ನು ನಾವೇ ಮಹಿಮೆ ಪಡಿಸಿಕೊಳ್ಳದೆ ದೇವರಿಗೆ ಮಹಿಮೆ ಆಗುವಂತೆ ನಮ್ಮನ್ನು ಸೃಷ್ಟಿಸಿದ ದೇವರಿಗೆ ವಿದೇಯರಾಗಿ ಲೋಕಕ್ಕೆ ಬೆಳಕು ಕೊಡುವ ನಕ್ಷತ್ರಗಳಂತೆ ದೇವರಿಗೆ ಸಾಕ್ಷಿಗಳಾಗಿ ಬಾಳಲು ಪ್ರಯತ್ನಿಸೋಣ, ಆಕಾಶದಲ್ಲಿ ಸೂರ್ಯ-ಚಂದ್ರ, ನಕ್ಷತ್ರಗಳು ನಮ್ಮ ಮೇಲೆ ಅಧಿಕಾರ ಚಲಾಯಿಸುವುದಿಲ್ಲ. ಬದಲಾಗಿ ಕತ್ತಲೆಯಲ್ಲಿ ನಮಗೆ ಬೆಳಕನ್ನು ಕೊಟ್ಟು ನಮ್ಮನ್ನು ಸದಾ ಕಾಲವು ಕಾಯುತ್ತವೆ. ಅದರಂತೆಯೇ ನಾವೆಲ್ಲರೂ ನಮ್ಮ ಜೀವನ ಯಾತ್ರೆಯಲ್ಲಿ ಬೆಳಕು ಕೊಡುವ ನಕ್ಷತ್ರಗಳಂತೆ ಭೂಮಿಯ ಮೇಲೆ ನಮ್ಮ ಸದ್ಗುಣಗಳ ಮೂಲಕ ಬೆಳಕಾಗಿ ಬಾಳಲು ಪ್ರಯತ್ನಿಸೋಣ. ಭೂಮಿಯ ಮೇಲೆ ಬಡತನ, ಕಷ್ಟ, ಹಿಂಸೆ, ದುಖ:ದಿಂದ ಕತ್ತಲೆಯಲ್ಲಿ ಜೀವಿಸುತ್ತಿರುವ ಜನರ ಮಧ್ಯದಲ್ಲಿ ಹೃದಯವೆಂಬ ಪುಟ್ಟ ನಕ್ಷತ್ರದಿಂದ ಶಾಂತಿ ಸಮಾಧಾನದ ಬೆಳಕಿನ ಕಿರಣಗಳು ಪ್ರಕಾಶಿಸಲಿ. ‘‘ನಾಡಿನ ಸಮಸ್ತ ಜನರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು’’
-ಸ್ಟೀವನ್ ಬೆನಡಿಕ್ಟ್ ಫಿಲಿಪ್
ಕೂಡುಮಂಗಳೂರು.
ಮೊ: ೯೭೩೧೧೮೧೨೮೮.