ಮಡಿಕೇರಿ, ಡಿ. ೨೩: ಮಡಿಕೇರಿ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಜನವರಿ ೨೮ ರಂದು ನಡೆಸುವಂತೆ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಕಾರ ಸಂಘದ ಪದಾಧಿಕಾರಿಗಳು, ಊರಿನ ಪ್ರಮುಖರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಊರಿನ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸ್ತಿçÃಶಕ್ತಿ, ಧರ್ಮಸ್ಥಳ ಗ್ರಾಮದ ಅಭಿವೃದ್ಧಿ ಸಂಘ, ಯುವಕ ಸಂಘಗಳು, ಯುವತಿ ಸಂಘಗಳು, ಆಟೋ ಮತ್ತು ವಾಹನ ಚಾಲಕರ ಸಂಘಗಳ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಊರಿನ ಎಲ್ಲಾ ಆಸಕ್ತ ಕನ್ನಡ ಮನಸುಗಳು ಒಂದಾಗಿ ಸೇರಿ ಮಡಿಕೇರಿ ತಾಲೂಕಿನ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಊರಿನ ಹಬ್ಬದಂತೆ ನಡೆಸಿಕೊಡಬೇಕೆಂದು ಕೋರಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಸಮ್ಮೇಳನ ನಡೆಯುವ ಪ್ರದೇಶದ ಪ್ರತಿಯೊಬ್ಬರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು. ಸಮ್ಮೇಳನದಲ್ಲಿ ನಾಡಿಗೆ ಸೇವೆ ಸಲ್ಲಿಸಿ ಗತಿಸಿ ಹೋದವರ ಸೇವೆಗಳನ್ನು ನೆನಪಿಸಿಕೊಳ್ಳುವಂತಹ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಸಾಹಿತ್ಯ ಸಮ್ಮೇಳನ ನಡೆದ ಪ್ರದೇಶದ ಹಿರಿಮೆ ಗರಿಮೆ ಆ ಪ್ರದೇಶದಲ್ಲಿ ಬರುವ ಪ್ರಾಕೃತಿಕ ಸೌಂದರ್ಯದ ಪ್ರದೇಶಗಳ ಬಗ್ಗೆ ದೇವಾಲಯಗಳ ಬಗ್ಗೆ ಸಾಂಸ್ಕೃತಿಕ ನೆಲೆಗಳ ಬಗ್ಗೆ ಮಾಹಿತಿ ಇರುವಂತಹ ಸ್ಮರಣ ಸಂಚಿಕೆಯನ್ನು ತರಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ಗೋಷ್ಠಿಗಳು, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸುವ ಕುರಿತು ಮಾಹಿತಿ ನೀಡಿದರು.
ಶಾಸಕರುಗಳ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸುವಂತೆಯೂ ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಅಲಂಕಾರ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹೀಗೆ ಹತ್ತು ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲ ಸಮಿತಿಗಳಿಗೆ ಅಧ್ಯಕ್ಷರು ಸಂಚಾಲಕರು ಮತ್ತು ಕಾರ್ಯದರ್ಶಿಗಳು ಹಾಗೂ ೧೦ ಜನ ಸದಸ್ಯರು ಸೇರಿದಂತೆ ಸಮಿತಿ ರಚಿಸಿ ಮುಂದಿನ ಸಭೆಯಲ್ಲಿ ಸಮಿತಿಗಳ ಘೋಷಣೆ ಮಾಡುವಂತೆ ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉದಯ ಪ್ರೌಢಶಾಲೆಯ ಅಧ್ಯಕ್ಷ ತಳೂರು ಕಿಶೋರ್ ಮಾತನಾಡಿ, ನಮ್ಮ ಊರಿನಲ್ಲಿ ನಡೆಸಲಿರುವ ಸಾಹಿತ್ಯ ಸಮ್ಮೇಳನ ಒಂದು ಅಭೂತಪೂರ್ವ ಕಾರ್ಯಕ್ರಮದಂತೆ ನಡೆಸಿಕೊಡುವಲ್ಲಿ ತಾವೆಲ್ಲರೂ ಶ್ರಮವಹಿಸುವುದಾಗಿಯೂ ಇಡೀ ಗ್ರಾಮದ ಜನರನ್ನು ಒಗ್ಗೂಡಿಸಿ ಸಮ್ಮೇಳನ ಮಾಡಬೇಕಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಊರಿನಲ್ಲಿ ಮಾಡುವಂತೆ ತೀರ್ಮಾನಿಸಿದ್ದು ಖುಷಿ ತಂದಿದೆ. ಪಂಚಾಯಿತಿ ಅಧ್ಯಕ್ಷನಾಗಿ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಂಡು ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಘೋಷಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲ ಗಣಪತಿ ಅವರು ಊರಿನ ಎಲ್ಲರೂ ಸೇರಿ ಸಮ್ಮೇಳನವನ್ನು ನಡೆಸುವ ಎಂದು ಅಭಿಪ್ರಾಯಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಈ ಹಿಂದೆ ಪಕ್ಕದ ಚೇರಂಬಾಣೆಯಲ್ಲಿ ೧೦ನೇ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸಂದರ್ಭ ಊರಿನ ಪ್ರಮುಖರು ಎಲ್ಲರೂ ನೀಡಿದ ಸಹಕಾರವನ್ನು ನೆನಪಿಸಿಕೊಂಡು ಅದಕ್ಕೂ ಮಿಗಿಲಾದಂತೆ ಈ ಸಮ್ಮೇಳನವನ್ನು ನಡೆಸುವಂತೆ ಸಹಕಾರ ನೀಡಬೇಕು ಎಂದರು.
ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೇಕಲ್ ನವೀನ್ ಅವರನ್ನು ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ವೇದಿಕೆಯಲ್ಲಿ ಉದಯ ಶಾಲೆಯ ಮುಖ್ಯೋಪಾಧ್ಯಾಯನಿ ಕವಿತಾ ಸೋಮಣ್ಣ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಧರಣಿ, ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಜೆ. ಪತ್ರವೋ, ನಾಪೋಕ್ಲು ಹೋಬಳಿ ಅಧ್ಯಕ್ಷ ನೆರವಂಡ ಉಮೇಶ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಎಂ.ಬಿ. ಜೋಯಪ್ಪ, ತಾಲೂಕು ಕೋಶಾಧಿಕಾರಿ ಗೀತಾ ಗಿರೀಶ್, ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿ ತಳೂರು ದಿನೇಶ್, ಕಡ್ಲೆರ ತುಳಸಿ ಮೋಹನ್ ಉಪಸ್ಥಿತರಿದ್ದರು.
ಸಭೆಯಲ್ಲಿ ತಲಕಾವೇರಿ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ, ಪಟ್ಟಡ ಪೊನ್ನಪ್ಪ, ಮಟ್ಟನ ಉಲ್ಲಾಸ್, ನೆಯ್ಯಾಣಿ ಹೇಮಲತಾ, ತಳೂರ್ ಶಾಂತಿ, ಪ್ರಕಾಶ್, ಹೇಮಲತಾ ಪೂರ್ಣಚಂದ್ರ, ಶ್ರೀಮತಿ ಕಡ್ಲೇರ ಜಯಲಕ್ಷಿö್ಮ, ದೊರೆ ಮಾದಪ್ಪ, ಪವಡಂಡ ಭೀಮಯ್ಯ, ಚಂದ್ರಪ್ರಭ, ತೀರ್ಥ ಗಣಪತಿ, ಬಿ.ಎಂ. ಪುಷ್ಪಾವತಿ, ಚಳಿಯಂಡ ಯತೀಶ್, ಮೊಯ್ದು ಕುನಿಃ, ತಳೂರು ಕೇಶವ, ಉದಯ ಶಾಲೆಯ ಅಧ್ಯಾಪಕ ನಾಗರಾಜು, ಶಾಲಿನಿ, ಜೀವಿತ, ದಿವ್ಯ, ಜ್ಞಾನ ಪ್ರಕಾಶ್, ಜಗನ್ನಾಥ್, ಪಟ್ಟಡ ಪ್ರಭಾಕರ್, ತಳೂರು ಕಾಳಪ್ಪ, ಕಟ್ರತನ ಚಿನ್ನಪ್ಪ, ಪ್ರಕಾಶ್ ಆಚಾರ್ಯ, ಭಾಗಮಂಡಲ ಹೋಬಳಿ ಮಾಜಿ ಅಧ್ಯಕ್ಷ ಶ್ರೀಧರ್, ಮೂರ್ನಾಡು ಹೋಬಳಿ ಮಾಜಿ ಅಧ್ಯಕ್ಷ ಪಿ.ಪಿ ಸುಕುಮಾರ್, ಆರ್.ಪಿ. ಚಂದ್ರಶೇಖರ್, ಸುನಿಲ್ ಪಿಂಟೋ ಅಲ್ಲದೆ ಸ್ತಿçÃಶಕ್ತಿ ಸದಸ್ಯರು ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯಿತಿಯ ಸದಸ್ಯರು ಊರ ಪ್ರಮುಖರು ಉಪಸ್ಥಿತರಿದ್ದು ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಕಡ್ಲೆರ ತುಳಸಿ ನಿರೂಪಿಸಿ, ತಳೂರು ದಿನೇಶ್ ಸ್ವಾಗತಿಸಿ, ರೇವತಿ ರಮೇಶ್ ವಂದಿಸಿದರು.