ಕುಶಾಲನಗರ, ಡಿ. ೨೩: ಕುಶಾಲನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರÀ ಆರ್ಥಿಕ ಸಾಕ್ಷರತೆಗಾಗಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸಿದ್ದು, ಈ ತಿಂಗಳ ೨೫ ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘದ ನಿರ್ವಹಣಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಮಿತಿ ಪ್ರಮುಖರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಸರ್ವಾಂಗೀಣ ಶ್ರೇಯೋಭಿವೃದ್ಧಿಗಾಗಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ಶಾಖೆಯನ್ನು ಕುಶಾಲನಗರದಲ್ಲಿ ತೆರೆಯಲು ಮುಂದಾಗಿದೆ ಎಂದರು.

ಶಾಖೆಯ ಸಮನ್ವಯ ಸಮಿತಿಯ ಸದಸ್ಯರಾದ ಬಿ.ಸಿ ರಾಜು ಮತ್ತು ಹೆಚ್.ಆರ್. ಪುಟ್ಟಸ್ವಾಮಿ ಮಾತನಾಡಿ, ಬ್ಯಾಂಕಿAಗ್ ಕ್ಷೇತ್ರದ ಸೌಲಭ್ಯಗಳನ್ನು ಪಡೆದು ಪ.ಜಾತಿ ಮತ್ತು ಪ.ಪಂಗಡದ ಜನಾಂಗ ಅಭಿವೃದ್ದಿಯತ್ತ ಸಾಗುವ ಆಶಯ ವ್ಯಕ್ತಪಡಿಸಿದರು. ರಾಜ್ಯದ ಸಂಘ ಸಂಸ್ಥಾಪಕ ಅಧ್ಯಕ್ಷರಾದ ತುಂಬಲ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬುದ್ದ, ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ, ಕುಶಾಲನಗರ ಬೈಪಾಸ್ ರಸ್ತೆಯಲ್ಲಿರುವ ಕಚೇರಿ ಉದ್ಘಾಟನೆ, ಷೇರು ಪತ್ರ ವಿತರಣೆ, ಪಾಸ್ ಪುಸ್ತಕ ವಿತರಣೆ ಮತ್ತು ಸಾಲದ ಚೆಕ್ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ನಿರ್ವಹಣಾ ಸಮಿತಿಯ ಸದಸ್ಯರಾದ ಹೆಚ್.ಡಿ. ಚಂದ್ರು ಮಾತನಾಡಿ, ಸಂಘದ ಉದ್ಘಾಟನೆ ಸಂದರ್ಭ ಸಮುದಾಯದ ಗುರುಗಳಾದ ಜ್ಞಾನಪ್ರಕಾಶ ಸ್ವಾಮೀಜಿ ಅವರ ಭವ್ಯ ಮೆರವಣಿಗೆಯನ್ನು ಕೊಪ್ಪ ಕಾವೇರಿ ಪ್ರತಿಮೆಯಿಂದ ಹೊರಟು ನಂತರ ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಉದ್ಘಾಟನ ಕಾರ್ಯಕ್ರಮ ನೆರವೇರಲಿದೆ ಎಂದರು.

ಈ ಸಂದರ್ಭ ಗೋಷ್ಟಿಯಲ್ಲಿ ಸಂಘದ ಸಮನ್ವಯ ಸಮಿತಿ ಸದಸ್ಯರಾದ ಹೆಚ್.ಬಿ. ಗಣೇಶ್, ಕೆ.ಎಸ್. ರವಿ, ಎ.ಎಸ್. ಕೃಷ್ಣ, ಇದ್ದರು.