*ಗೋಣಿಕೊಪ್ಪ, ಡಿ. ೨೩: ಮುಖ್ಯಮಂತ್ರಿ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಮೀನು ಕೃಷಿಕರ ಮಕ್ಕಳಿಗೂ ಕಾರ್ಯಕ್ರಮವನ್ನು ವಿಸ್ತರಿಸಿದ್ದು, ಕೊಡಗು ಜಿಲ್ಲೆಯಲ್ಲಿ ಸಕ್ರೀಯ ಮೀನುಗಾರರ ಮಕ್ಕಳು ೮ ರಿಂದ ೧೦ನೇ ತರಗತಿ ಮತ್ತು ಪದವಿ, ಪದವಿಪೂರ್ವ ಇನ್ನಿತರ ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿದ್ದು, ವಿದ್ಯಾನಿಧಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು Sಖಿಂಖಿಇ SಅಊಔಐಂಖSಊIP Pಔಖಖಿಂಐನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವAತೆ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಅಧಿಕಾರಿ ಸಚಿನ್ ಮಾಹಿತಿ ನೀಡಿದ್ದಾರೆ.