ವೀರಾಜಪೇಟೆ, ಡಿ. ೨೩: ಕ್ಷÄಲ್ಲಕ ಕಾರಣಕ್ಕಾಗಿ ಪತ್ನಿಯೇ ಪತಿಯ ಕುತ್ತಿಗೆಗೆ ವಸ್ತçದಿಂದ ಬಿಗಿದು ಕೊಲೆ ಮಾಡಿದ ಘಟನೆ ಸಮೀಪದ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ.

ಬೊಳ್ಳುಮಾಡು ಗ್ರಾಮದ ತೋಟವೊಂದರ ಲೈನ್‌ಮನೆಯಲ್ಲಿ ವಾಸವಾಗಿದ್ದ ಸುಂದರ (೩೬) ಎಂಬಾತನೆ ಮೃತ ವ್ಯಕ್ತಿ.

ತಾ. ೨೨ರಂದು ಮಧ್ಯರಾತ್ರಿ ಸುಂದರ ಹಾಗೂ ಪತ್ನಿ ಶೋಭಾ ಅವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಕಲಹ ಉಂಟಾಗಿದೆ. ಕಲಹ ವಿಕೋಪಕ್ಕೆ ತಿರುಗಿದ ಸಂದರ್ಭ ಪತ್ನಿ ಶೋಭಾ ಹಲ್ಲೆಗೈದು ವಸ್ತçದಿಂದ (ವೇಲ್) ಪತಿಯ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ ಪೊಲೀಸರು ಆರೋಪಿ ಶೋಭಾಳನ್ನು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ ಹಾಗೂ ಶೋಭ ದಂಪತಿ ಲೈನ್‌ಮನೆಯಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.