ಮಡಿಕೇರಿ, ಡಿ. ೨೩ : ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಗೌಡ ಜನಾಂಗದ ನಡುವೆ ಗ್ರಾಮಗಳ ನಡುವೆ ಅಂತರ ಗ್ರಾಮ ಕ್ರಿಕೆಟ್ ಪಂದ್ಯಾವಳಿ ಹಾಗೂ ೦.೨೨ ಮತ್ತು ೧೨ ಬೋರ್ ಬಂದೂಕು ಗುರಿ ಹೊಡೆತ ಸ್ಪರ್ಧೆ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಆಯೋಜಕರು; ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾ.೨೫ ರಿಂದ ೩೧ ರವರೆಗೆ ಪಂದ್ಯಾವಳಿಗಳು ನಡೆಯಲಿವೆ. ತಾ. ೨೫ ರಂದು ಬೆಳಿಗ್ಗೆ ೯ ಗಂಟೆಗೆ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಪಂದ್ಯಾವಳಿಗಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಯುವ ವೇದಿಕೆ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಅರುಣ ಪ.ಪೂ. ಕಾಲೇಜಿನ ಪ್ರಾಂಶುಪಾಲ ದಾಯನ ರಾಮಚಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಾ. ೨೫ ರಂದು ಬೆಳಿಗ್ಗೆ ೯ ಗಂಟೆಯಿAದ ೧೦.೩೦ ರವರೆಗೆ ಬಂದೂಕು ಗುರಿ ಹೊಡೆತದ ಸ್ಪರ್ಧೆಯ ನೋಂದಾಣಿ ಪ್ರಕ್ರಿಯೆ ಮೈದಾನದಲ್ಲಿಯೇ ನಡೆಯಲಿದೆ. ನಂತರ ಬರುವವರಿಗೆ ಅವಕಾಶ ಇರುವದಿಲ್ಲ. ಕ್ರಿಕೆಟ್ ಪಂದ್ಯಾವಳಿಗೆ ಸಂಬAಧಿಸಿದAತೆ ಈಗಾಗಲೇ ಟೈಸ್ ಪ್ರಕ್ರಿಯೆ ನಡೆದಿದೆ. ತಾ. ೨೫ ರಂದು ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ
(ಮೊದಲ ಪುಟದಿಂದ) ಯುವ ವೇದಿಕೆ ತಂಡಗಳ ನಡುವೆ ಪ್ರದರ್ಶನ ಪಂದ್ಯದೊAದಿಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ಗಳೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವದು. ಅಲ್ಲದೆ, ವೈಯಕ್ತಿಕ ಬಹುಮಾನ ಕೂಡ ನೀಡಲಾಗುವದು. ಬಂದೂಕು ಗುರಿ ಹೊಡೆತ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳೆಯರು ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ತಾ. ೩೧ರ ಸಮಾರೋಪ ಸಮರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವದು. ಹೆಚ್ಚಿನ ಮಾಹಿತಿಗೆ ಕೂರನ ಪ್ರವೀಣ್ (೮೭೬೨೮೯೭೧೬೭), ಕಟ್ಟೆಮನೆ ರಾಜೇಶ್ (೭೪೮೩೯೭೬೬೨೮), ಪುದಿಯನೆರವನ ರಿಶಿತ್ (೯೯೭೨೩೭೬೧೫೧) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕೂರನ ಪ್ರವೀಣ್, ಪುದಿಯನೆರವನ ರಿಶಿತ್ ಮಾದಯ್ಯ, ಕಟ್ಟೆಮನೆ ರಾಜೇಶ್, ಕೂಡಕಂಡಿ ಡಾಲಿ ಇದ್ದರು.