*ಗೋಣಿಕೊಪ್ಪ, ಡಿ. 22: ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ವಿಜಯನಗರ ನಿವಾಸಿ ಆಯೂಬ್ ಅವರನ್ನು ನೇಮಿಸಲಾಗಿದೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು, ಕಾಂಗ್ರೆಸ್ ವರಿಷ್ಠರ ನಿರ್ದೇಶನದ ಮೇರೆಗೆ ಆಯೂಬ್ ಅವರನ್ನು ನೇಮಕ ಆದೇಶ ನೀಡಿದ್ದಾರೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾಹಿತಿ ನೀಡಿದ್ದಾರೆ.

ಆಯೂಬ್ ಅವರು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾನೂನು ಘಟಕದ ಸಲಹೆಗಾರ ಎ.ಎಸ್. ಪೆÇನ್ನಣ್ಣ ಹಾಗೂ ಇತರ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಆದೇಶ ಪತ್ರವನ್ನು ಪಡೆದುಕೊಂಡರು.