ಕುಶಾಲನಗರ, ಡಿ. ೨೩: ಪ್ರತಿಯೊಬ್ಬರು ಸಂಸ್ಕಾರಯುತ ಬದುಕು ಸಾಗಿಸುವಂತಾಗಬೇಕೆAದು ಧಾರ್ಮಿಕ ಚಿಂತಕರಾದ ಚಿ.ನಾ. ಸೋಮೇಶ್ ಕರೆ ನೀಡಿದ್ದಾರೆ.
ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯದ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ, ಸಂಸ್ಕಾರ, ನಂಬಿಕೆ, ಪೂಜ್ಯ ಭಾವನೆ ಹೊಂದುವ ಮೂಲಕ ಉತ್ತಮ ಜೀವನ ಪಡೆಯಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಹಲವು ಯೋಜನೆಗಳ ಸದುಪಯೋಗವನ್ನು ಪಡೆಯುವ ಮೂಲಕ ಲಕ್ಷಾಂತರ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸುವಂತಾಗಿದೆ ಎಂದರು.
ಸಂಘಟಿತ ವ್ಯವಸ್ಥೆ ಮೂಲಕ ಪರಿಶ್ರಮದೊಂದಿಗೆ ಪ್ರಗತಿ ಸಾಧ್ಯ ಎಂದ ಸೋಮೇಶ್, ಬದುಕು ಕ್ಷಣಿಕವಾಗಬಾರದು. ಪ್ರತಿಯೊಬ್ಬರು ಸಮಾಜಮುಖಿ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ರೈತರು, ಮಹಿಳೆ ಯರು, ಯುವಕ-ಯುವತಿಯರ ಕಲ್ಯಾಣಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾಗಿದೆ ಎಂದರು. ಮನುಷ್ಯ ಧಾರ್ಮಿಕ ನಂಬಿಕೆಯ ತಳಹದಿಯ ಮೇಲೆ ಬದುಕುತ್ತಿದ್ದು, ನಮ್ಮಲ್ಲಿನ ಕೌಟುಂಬಿಕ ವಾತಾವರಣ ವಿದೇಶಿಗರ ಕಣ್ತೆರೆಸಿದೆ ಎಂದರು.
ಹಿAದೂ ಮುಸ್ಲಿಂ, ಕ್ರೈಸ್ತ ಎಲ್ಲರು ಒಂದೇ ಎಂಬ ಸಂದೇಶ ಸಾರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹೆಚ್. ರೋಹಿತ್ ಪ್ರಾಸ್ತವಿಕವಾಗಿ ಮಾತನಾಡಿ, ಅಭಿವೃದ್ಧಿಯ ನಡುವೆ ಧಾರ್ಮಿಕತೆಯ ಅಗತ್ಯತೆಯ ಮಾಹಿತಿಯನ್ನು ಒದಗಿಸಿದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಬಿ. ಪಾರ್ವತಿ, ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಆರಕ್ಷಕ ಉಪನಿರೀಕ್ಷಕ ಎಂ.ಡಿ ಅಪ್ಪಾಜಿ, ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕೊಡಗು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಸತೀಶ್, ಕೊಡಗು ಜಿಲ್ಲಾ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಕೊಡಗು ಜನಜಾಗೃತಿ ಸಮಿತಿ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್ ಉಪಸ್ಥಿರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಕ್ಷೇತ್ರದ ವಿವಿಧ ಯೋಜನೆಯಡಿಯಲ್ಲಿ ಸಹಾಯಧನ, ವಿವಿಧ ಪರಿಕರ ವಿತರಿಸಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮಕ್ಕೂ ಮುನ್ನ ಅರ್ಚಕ ಪ್ರಸನ್ನಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ನಡೆಯಿತು.
ಕುಶಾಲನಗರ ವಲಯ ಮೇಲ್ವಿಚಾರಕಿ ಪೂರ್ಣಿಮಾ, ಸುಂಟಿಕೊಪ್ಪ ವಲಯ ಮೇಲ್ವೀಚಾರಕಿ ಪುಷ್ಪಲತಾ, ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ ಅಧ್ಯಕ್ಷೆ ರಾಧ, ಕಾರ್ಯದರ್ಶಿ ಪಿ. ನವ್ಯ, ಒಕ್ಕೂಟಗಳ ಅಧ್ಯಕ್ಷರುಗಳಾದ ಪಾರ್ವತಿ, ಝರೀನ, ಭುವನೇಶ್ವರಿ, ಜಗದೀಶ್, ಲಲಿತ, ಆಯಿಷ, ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಇದ್ದರು.