ನಾಪೋಕ್ಲು, ಡಿ. ೨೩: ಇಲ್ಲಿಗೆ ಸಮೀಪದ ಕಡಿಯತ್ತ ನಾಡು ಕೊಣಂಜಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವ ತಾ. ೨೫ ರಿಂದ ೩೦ ರವರೆಗೆ ನಡೆಯಲಿದೆ.
ಈ ಬಗ್ಗೆ ದೇವಾಲಯದಲ್ಲಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ತಾ. ೨೫ರಿಂದ ೩೦ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ದೇವಾಲಯದಲ್ಲಿ ನಡೆಯಲಿದ್ದು ಡಿಸೆಂಬರ್ ೩೦ರಂದು ಶುಕ್ರವಾರ ೧೦.೧೬ ಕ್ಕೆ ಮೀನಾ ಲಗ್ನ ಮುಹೂರ್ತದಲ್ಲಿ ಶ್ರೀ ಭದ್ರಕಾಳಿ ಚಾಮುಂಡೇಶ್ವರಿ ಹಾಗೂ ಉಪದೇವತೆಗಳ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ ತಂತ್ರಿ ಎ.ಜಿ ಪಂಡರೀಶ ಅರಳತ್ತಾಯ ಅವರ ನೇತೃತ್ವದಲ್ಲಿ ನಡೆಯಲಿದೆ.
ವಿವಿಧ ಧಾರ್ಮಿಕ ಕಾರ್ಯ
ತಾ. ೨೫ರಂದು ಸಂಜೆ ೫ ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅಂದು ಧ್ವಜಾರೋಹಣ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ ನೆರವೇರಲಿದೆ. ತಾ. ೨೬ ರಂದು ಗಣ ಹೋಮ, ಬಿಂಬಶುದ್ಧಿ, ಕಲಶ ಮೃತ್ಯುಂಜಯ ಹೋಮ ನಡೆಯಲಿದ್ದು ಅಂದು ಸಂಜೆ ಅಧಿವಾಸ ಹೋಮಗಳು ನಡೆಯಲಿವೆ. ತಾ. ೨೭ರಂದು ನಾಗ ಪ್ರತಿಷ್ಠೆ, ಆಶ್ಲೇಷ ಹೋಮ, ಆಶ್ಲೇಷ ಬಲಿ ನಡೆಯಲಿವೆ.
ತಾ. ೨೮ ರಂದು ಚಂಡಿಕಾ ಹೋಮ ನಡೆಯಲಿದ್ದು ಸಂಜೆ ಚಾಮುಂಡಿ ಸ್ಥಾನದಲ್ಲಿ ವಾಸ್ತು ಹೋಮ, ವಾಸ್ತು ಬಲಿ, ತಾ. ೨೯ ರಂದು ಗಣಪತಿ ಹೋಮ, ಚಾಮುಂಡಿ ಪ್ರತಿಷ್ಠಾ ಹೋಮ, ಚಾಮುಂಡಿ ಬಿಂಬ ಪ್ರತಿಷ್ಠೆ, ಸಂಜೆ ಕಲಶ ಮಂಡಲ ರಚನೆ, ಕಳಶ ಪ್ರತಿಷ್ಠೆ, ಶಿಖರ ಪೂಜೆ, ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಮೀನ ಲಗ್ನದಲ್ಲಿ ಬಿಂಬ ಪ್ರತಿಷ್ಠೆ, ಗಣಹೋಮ ,ಪ್ರತಿಷ್ಠಾ ಹೋಮ, ಶಿಖರ ಪ್ರತಿಷ್ಠೆ, ಮಹಾಪೂಜೆಗಳು ನೆರವೇರಲಿವೆ ಎಂದು ದೇವಾಲಯ ತಕ್ಕಮುಖ್ಯಸ್ಥ ಮೈಂದಪAಡ ಕುಮಾರ್ ನಾಣಯ್ಯ ತಿಳಿಸಿದ್ದಾರೆ.