ಮಡಿಕೇರಿ, ಡಿ. 22: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2022-23ನೇ ಸಾಲಿಗೆ ನೂತನ ಶಿಕ್ಷಣ ನೀತಿ ಪ್ರಕಾರ (ಎನ್‍ಇಪಿ) ವಿವಿಧ ಕೋರ್ಸ್‍ಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಆನ್‍ಲೈನ್ ಹಾಗೂ ನೇರವಾಗಿ ವಿಶ್ವವಿದ್ಯಾಲಯದ ಹೆಲ್ಪ್‍ಡೆಸ್ಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಬಿಪಿಎ ಹಾನರ್ಸ್: ನಾಲ್ಕು ವರ್ಷಗಳ ಕೋರ್ಸ್, ಹೊಸ ಶಿಕ್ಷಣ ನೀತಿ ಮಾದರಿಯಲ್ಲಿ ಐಚ್ಛಿಕ ವಿಷಯಗಳು: ನಾಟಕ, ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲಾ, ಮೃದಂಗ, ವೀಣಾ, ಪಿಟೀಲು, ಭಾಷಾ ಪತ್ರಿಕೆ: ಕನ್ನಡ/ ಐಚ್ಛಿಕ ಕನ್ನಡ/ ಸಂಸ್ಕøತ ಮತ್ತು ಇಂಗ್ಲೀಷ್, ಅರ್ಹತೆ: ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಎಂ.ಪಿ.ಎ: ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ (ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದುವುದು).

ಡಿ.ಲಿಬ್: ಸಂಗೀತ, ನೃತ್ಯ, ನಾಟಕ ಹಾಗೂ ಪ್ರದರ್ಶಕ ಕಲೆಗಳಲ್ಲಿ ಅಧ್ಯಯನ ನಡೆಸಿ ಉನ್ನತ ಮಟ್ಟದ ಪರಿಣಿತಿ ಹೊಂದಿರಬೇಕು. ಸರ್ಟಿಫಿಕೇಟ್ ಕೋರ್ಸ್ (6 ತಿಂಗಳು): ಭಕ್ತಿಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೋನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಯಕ್ಷಗಾನ, ಗಮಕ. ಪಿ.ಜಿ ಡಿಪ್ಲೊಮಾ 1 ವರ್ಷ: ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ (ಯಾವುದೇ ಪದವಿ ಅಥವಾ ತತ್ಸಮಾನ)ಹೊಂದಿರಬೇಕು.

ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ hಣಣಠಿs://ತಿತಿತಿ.musiಛಿuಟಿiveಡಿsiಣಥಿ.ಚಿಛಿ.iಟಿ ಅಂತರ್ಜಾಲದಲ್ಲಿ ಇರುವ ಯುಯುಸಿಎಂಎಸ್ ಲಿಂಕ್ hಣಣಠಿs://uuಛಿms.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. 26 ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಳಿಗೆ musiಛಿuಟಿiveಡಿsiಣಥಿ.ಚಿಛಿ.iಟಿ oಡಿ ಡಿegisಣಡಿಚಿಡಿ@musiಛಿuಟಿiveಡಿsiಣಥಿ.ಚಿಛಿ.iಟಿ ದೂ. 0821-2402141, 9880761877 ಸಂಪರ್ಕಿಸಬಹುದು. ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಸೌಲಭ್ಯವನ್ನು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವ ವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.

ಗುಮಾಸ್ತ ಸಹಾಯಕ ಹುದ್ದೆಗೆ

ಸಾಂಬಾರ ಮಂಡಳಿಯ ಸಕಲೇಶಪುರ ಪ್ರಾದೇಶಿಕ ಕಚೇರಿ ಮತ್ತು ಮಡಿಕೇರಿಯ ವಿಭಾಗೀಯ ಕಚೇರಿಯಲ್ಲಿ ತಲಾ ಒಂದು ಗುಮಾಸ್ತ ಸಹಾಯಕ ಹುದ್ದೆ ಖಾಲಿ ಇದ್ದು, 64 ವರ್ಷದೊಳಗಿನ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಭಾರತೀಯ ಸಾಂಬಾರ ಮಂಡಳಿ, ವಿಭಾಗೀಯ ಕಚೇರಿ, ಕುಶಾಲ್ ರೆಸಿಡೆನ್ಸಿ, ಎರಡನೇ ಮಹಡಿ, 14ನೇ ಬ್ಲಾಕ್, ನ್ಯೂ ಎಕ್ಸ್‍ಟೆನ್ಸನ್ ಮಡಿಕೇರಿ ದೂ. 08272-295056, 9087716080ನ್ನು ಸಂಪರ್ಕಿಸಬಹುದು ಎಂದು ಸಾಂಬಾರ ಮಂಡಳಿಯ ವಿಭಾಗೀಯ ಕಚೇರಿಯ ಸಹಾಯಕ ನಿರ್ದೇಶಕ ಎಸ್.ಎಸ್. ಬಿಜು ತಿಳಿಸಿದ್ದಾರೆ.

ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ

ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ ನಲ್ಮ್) ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಸೃಜಿಸಿ ಗೌರವ ಧನದ ಆಧಾರದ ಮೇಲೆ ಒಂದು ವರ್ಷಕ್ಕೆ ಪ್ರಬಾರ ಗುತ್ತಿಗೆ ಆಧಾರದ ಮೇಲೆ ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ನಿಯುಕ್ತಿಗೊಳಿಸಲು ಅನುಮೋದನೆ ನೀಡಿದ್ದು, ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಅರ್ಜಿಯನ್ನು ಈ ಕಚೇರಿಯಲ್ಲಿ ಲಭ್ಯವಿರುವ ನಮೂನೆಯನ್ನು ಪಡೆದು ಭರ್ತಿಮಾಡಿ ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ತಾ. 31 ರೊಳಗೆ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಡೇ-ನಲ್ಮ್ ಶಾಲೆಯಲ್ಲಿ ಮಾಹಿತಿ ಪಡೆಯಬಹುದು.

ಸಂಪನ್ಮೂಲ ವ್ಯಕ್ತಿಯಾಗಿ ಅರ್ಜಿ ಸಲ್ಲಿಸುವವರು ಪ್ರದೇಶ ಮಟ್ಟದ/ ಸ್ವಸಹಾಯ ಸಂಘದ ಕನಿಷ್ಟ 3 ವರ್ಷದ ಮಹಿಳಾ ಸದಸ್ಯರಿದ್ದು, ವಯೋಮಿತಿ 18 ರಿಂದ 45 ವರ್ಷದ ವಯೋಮಾನ ಇರಬೇಕು. ಈ ಕುರಿತು ಸಂಘದ ಸದಸ್ಯತ್ವದ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ದ್ವಿತೀಯ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾಭ್ಯಾಸ ಹೊಂದಿದವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ದೃಢೀಕೃತ ಶೈಕ್ಷಣಿಕ ದಾಖಲಾತಿ ಲಗತ್ತಿಸಿರಬೇಕು. ಕನಿಷ್ಟ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ಈ ಕುರಿತು ದೃಢೀಕೃತ ಪ್ರಮಾಣ ಪತ್ರ ಲಗತ್ತಿಸಿರಬೇಕು.

ಅಭ್ಯರ್ಥಿಯು ಸ್ವ ಸಹಾಯ ಸಂಘದಿಂದ ಸಾಲ, ಪಡೆದು ಮರು ಪಾವತಿ ಮಾಡಿರಬೇಕು/ ಚಾಲ್ತಿಯಲ್ಲಿರಬೇಕು. ಸಂಘದಲ್ಲಿ ಪಡೆದ ಸಾಲ ಮರು ಪಾವತಿಸದೇ ಸುಸ್ತಿದಾರರಾಗಿರಬಾರದು. ಈ ಕುರಿತು ಸಂಘದಿಂದ ದೃಢೀಕರಣ ಪತ್ರ ಲಗತ್ತಿಸಿರಬೇಕು. ಸಂಪನ್ಮೂಲ ವ್ಯಕ್ತಿಗಳು ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಈ ಕುರಿತು ಅಗತ್ಯ ದಾಖಲೆ ಲಗತ್ತಿಸಬೇಕು. ಆಯ್ಕೆಯಾಗುವ ಸಂಪನ್ಮೂಲ ವ್ಯಕ್ತಿಗಳು ಸರಕಾರ ಸೂಚಿಸುವ ಬೇರೆ ಬೇರೆ ಸ್ಥಳಗಳಲ್ಲಿ, ಜಿಲ್ಲೆಗಳಲ್ಲಿ ಹೊರ ರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. ಪಂಚಸೂತ್ರದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಸ್ವ ಸಹಾಯ ಸಂಘ ನಿರ್ವಹಿಸಬೇಕಾದ ಪುಸ್ತಕಗಳ ಹಾಗೂ ವಹಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಸರ್ಕಾರಿ/ ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು. ಮುಂಬೈ ಸಕ್ರಮ ಪ್ರಾಧಿಕಾರವು ಸರ್ಕಾರ ಹಾಗು ನಗರಸಭೆ ನಿಗದಪಡಿಸುವ ನಿಯಮ, ನಿರ್ದೇಶನಗಳಿಗೆ ಬದ್ಧರಾಗಿರಬೇಕು ಎಂದು ನಗರಸಭೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ.