ಮಡಿಕೇರಿ, ಡಿ. 22: ನಗರದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತಾ.24ರಂದು ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಜಿ ಚಂದ್ರಶೇಖರ್, ಅಂದು ಬೆಳಿಗ್ಗೆ 6 ಗಂಟೆಯಿಂದ ವಿವಿಧ ಪೂಜಾ ಕಾರ್ಯಗಳು ನಡೆಯಲಿದ್ದು, 12 ಗಂಟೆಗೆ ಮಹಾಮಂಗಳಾರತಿ ಜರುಗಲಿದೆ. 1 ಗಂಟೆಗೆ ಪಾಲಕೊಂಬು ಪ್ರತಿಷ್ಠಾಪನೆ, ಮಧ್ಯಾಹ್ನ 1.30ಕ್ಕೆ ಚಂಡೆಸೇವೆ ನಡೆಯಲಿದೆ.
ಸಂಜೆ 4 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ನಗರದ ಮುಖ್ಯ ಬೀದಿಗಳಲ್ಲಿ ಚಂಡೆ ಮೇಳದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. 6.30 ಗಂಟೆಗೆ ದೀಪಾರಾಧನೆ, ಅಲಂಕಾರ ಪೂಜೆ, 7.30ಕ್ಕೆ ಪಡಿ ರಂಗಪೂಜೆ, ದುರ್ಗಾಪೂಜೆ, ಸುಬ್ರಹ್ಮಣ್ಯ ಪೂಜೆ, 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಇರಲಿದೆ. ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಅಗ್ನಿಪೂಜೆ, 2 ಗಂಟೆಯಿಂದ 5.30ರವರೆಗೆ ಪೆÇಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡವು ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಹೇಮಂತ್ ಕುಮಾರ್, ಕಾರ್ಯದರ್ಶಿ ರವಿ, ಸಲಹೆಗಾರರಾದ ದೊರೆಸ್ವಾಮಿ, ಬಸವರಾಜಿ ಹಾಜರಿದ್ದರು.