ಮಡಿಕೇರಿ, ಡಿ. 22: ಕೊಡಗು ಗೌಡರ ಕ್ಷೇಮಾಭಿವೃದ್ಧಿ ಸಂಘ ಹೂಟಗಳ್ಳಿ ಮೈಸೂರು ಇದರ 9ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ವಿಜಯನಗರ 2ನೇ ಹಂತದಲ್ಲಿರುವ ಕೊಡಗು ಗೌಡ ಸಮಾಜದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಚಾಮುಂಡೇಶ್ವರಿ ಹಾಲಿ ಶಾಸಕರು ಮತ್ತು ಮಾಜಿ ಮಂತ್ರಿಗಳಾದ ಜಿ.ಟಿ. ದೇವೇಗೌಡ, ಮೈಸೂರು ಗೌಡ ಸಮಾಜ ಅಧ್ಯಕ್ಷ ತೋಟಂಬೈಲು ಮನೋಹರ್, ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕಡ್ಯದ ಶ್ರೀಕಾಂತ್ ಹಾಜರಿದ್ದರು.

ಜಿ.ಟಿ. ದೇವೇಗೌಡರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೊಡಗಿನವರು ಮೈಸೂರಿನಲ್ಲಿ ನೆಲೆಸಿ ಎಲ್ಲರೊಂದಿಗೆ ಬೆರೆತು ಜೀವನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆದುಕೊಳ್ಳುವ ಜೊತೆಗೆ ಸರಕಾರಿ ಉದ್ಯೋಗ ಪಡೆಯುವ ಗುರಿ ಹೊಂದಬೇಕು. ಅಲ್ಲದೆ ಕ್ರೀಡಾ ವಿಭಾಗ (ಕರಾಟೆ ವಿಭಾಗ)ದಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡುಮನೆ ಚಂಗಪ್ಪ ವಹಿಸಿದ್ದರು. ಬೆಪ್ಪುರನ ಗಾಯತ್ರಿ, ಗೌರವ ಕಾರ್ಯದರ್ಶಿ ಬೋಳನ ಜಯಪ್ರಸಾದ್, ಸಹಕಾರ್ಯದರ್ಶಿ ನಿಡ್ಯಮಲೆ ನಂದೀಶ್, ಖಜಾಂಚಿ ಪೊನ್ನಚ್ಚನ ಅಪ್ಪಯ್ಯ, ನಿರ್ದೇಶಕರುಗಳಾದ ಕೂಡಕಂಡಿ ದೀಕ್ಷಿತ್, ಉದಯಾನ ಸುರೇಶ್, ಪುದಿಯನೆರವನ ಚಂದ್ರಶೇಖರ್, ಮೂವನ ನವೀನ್, ಕುಂಜಿಲನ ನಾಗರಾಜು, ಸೂರ್ತಲೆ ಹರೀಶ್, ಚೆರುಕನ ಕುಶ, ಕುಯ್ಯಮುಡಿ ಗೀತಾ, ಕಾಳಮನೆ ಉಲ್ಲಾಸ್ ಅವರು ಭಾಗವಹಿಸಿದ್ದರು.