ಶನಿವಾರಸಂತೆ, ಡಿ. ೨೩: ಸರ್ವೇಂದ್ರಿಯಾಣA ನಯನಂ ಪ್ರಧಾನಂ ಎಂಬAತೆ ಮನುಷ್ಯನಿಗೆ ಕಣ್ಣು ಮುಖ್ಯ ಎಂಬುದು ತಿಳಿದಿದೆ ವಿನಃ ಕಣ್ಣಿನ ಆರೋಗ್ಯವೂ ಅಷ್ಟೇ ಮುಖ್ಯ ಎಂದು ಭಾವಿಸುವುದಿಲ್ಲ ಎಂದು ಹಾಸನ ಐದೃಷ್ಟಿ ಆಸ್ಪತ್ರೆಯ ವೈದ್ಯೆ ಡಾ. ಮೋನಿಷಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಕಾವೇರಿ ಕ್ಲಿನಿಕ್ ಐದೃಷ್ಟಿ ಕಣ್ಣಿನ ಆಸ್ಪತ್ರೆ ಹಾಗೂ ಒನ್ಸೈಟ್ ಇಸ್ಸಿಲೋರ್ ಲುಕ್ಷೆÆಟ್ಟಿಕ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂಚೇAದ್ರಿಯಗಳಲ್ಲಿ ಕಣ್ಣು ಸೂಕ್ಷö್ಮ ಅಂಗವಾಗಿದ್ದು, ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ದೃಷ್ಟಿದೋಷದ ಬಗ್ಗೆ ನಿರ್ಲಕ್ಷö್ಯ ಸಲ್ಲದು. ಮಧುಮೇಹ, ರಕ್ತದೊತ್ತಡದ ರೋಗಿಗಳು ಜಾಗೃತೆ ವಹಿಸಬೇಕು. ಶೀಘ್ರ ಚಿಕಿತ್ಸೆಗೆ ಗಮನ ಕೊಡಬೇಕು. ಗ್ರಾಮೀಣ ಜನತೆಯಲ್ಲಿ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಘ್ನೇಶ್ವರ ಕಲ್ಯಾಣ ಮಂಟಪ ಮಾಲೀಕ ಕೃಷ್ಣರಾಜ್ ಮಾತನಾಡಿ, ದೇಹಾರೋಗ್ಯದಲ್ಲಿ ಕಣ್ಣಿನ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಚಿಕಿತ್ಸೆ ಜೊತೆಗೆ ದೃಷ್ಟಿಗೆ ಪೂರಕವಾದ ಹಸಿರು ಸೊಪ್ಪು, ವಿಟಮಿನ್ಯುಕ್ತ ತರಕಾರಿ ಸೇವನೆಯು ಮುಖ್ಯ ಎಂದರು.
ಐದೃಷ್ಟಿ ಕಣ್ಣಿನ ಆಸ್ಪತ್ರೆ ವ್ಯವಸ್ಥಾಪಕ ಸಂದೀಪ್ ಐತಾಳ್ ಮಾತನಾಡಿ, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಶಿಬಿರದಲ್ಲಿ ೩೦೦ ಮಂದಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಉಚಿತ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿದ್ದವರಿಗೆ ೧೫ ದಿನಗಳ ಒಳಗೆ ಶನಿವಾರಸಂತೆಯ ಕಾವೇರಿ ಕ್ಲಿನಿಕ್ನಲ್ಲಿ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು ಎಂದು ತಿಳಿಸಲಾಯಿತು.
ಕಾವೇರಿ ಕ್ಲಿನಿಕ್ ವೈದ್ಯ ಡಾ. ಎ.ಎ. ಪುಟ್ಟರಾಜ್, ಆಯೋಜಕರಾದ ಪಿಡಿಓ ಎಸ್.ಪಿ. ಲಿಖಿತಾ, ಇಂಜಿನಿಯರ್ ಎಸ್.ಪಿ. ಮೋನಿಕಾ, ಪತ್ರಕರ್ತೆ ಶ.ಗ. ನಯನತಾರಾ, ಪ್ರಮುಖರಾದ ಸುಧಾ ಪುಟ್ಟರಾಜ್, ಯಶೋಧಾ, ಐದೃಷ್ಟಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ಭುವನಾ, ಪ್ರಮೋದಿನಿ, ಸಂಜು, ಸಂತೋಷ್ ಉಪಸ್ಥಿತರಿದ್ದರು.