ಬಿರುನಾಣಿ, ಡಿ. ೨೧: ಮರೆನಾಡು ಪ್ರೌಢಶಾಲೆ, ಬಿರುನಾಣಿಯ ೨೦೨೨-೨೩ನೇ ಸಾಲಿನ ೬೦ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ವನ್ನು ನಾಡಿನ ವಿದ್ಯಾಭಿಮಾನಿ ಗಳೊಂದಿಗೆ ವಿಜೃಂಭಣೆಯಿAದ ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವು ಶಾಲಾ ಮೈದಾನದಲ್ಲಿ ಕ್ರೀಡೋತ್ಸವ ವನ್ನು ಆಯೋಜಿಸಲಾಗಿತ್ತು. ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಅವರು ಧ್ವಜಾ ರೋಹಣವನ್ನು ನೆರವೇರಿಸಿದರು. ರಾಷ್ಟçಗೀತೆಯನ್ನು ಹಾಡುವುದರ ಮೂಲಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ಕಾಯಪಂಡ ಎಂ. ಸುನಿಲ್ ಮಾಚಯ್ಯ ಶಾಲೆಯ ವಿದ್ಯಾರ್ಥಿ ಗಳಿಂದ ಗೌರವ ರಕ್ಷೆ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಬಿರುನಾಣಿ ಗ್ರಾ.ಪಂ. ಅಧ್ಯಕ್ಷೆ ಮಲ್ಲೇಂಗಡ ಎನ್. ರೀನಾ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ವಿದ್ಯಾರ್ಥಿಗಳಿಂದ ಕವಾಯಿತು ನೆರವೇರಿತು. ಗೌರವ ಕಾರ್ಯದರ್ಶಿ ಕುಪ್ಪಣಮಾಡ ನಂಜಮ್ಮ ದೇವಯ್ಯ (ಬೇಬಿ) ವಸ್ತು ಪ್ರದರ್ಶನ ಉದ್ಘಾಟನೆ ಮಾಡಿದರು. ಶಾಲೆಯ ಹಾಗೂ ಪಕ್ಕದ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಗಳನ್ನು, ನಾಡಿನ ಸಾರ್ವಜನಿಕರಿಗೆ ವಾಲಿಬಾಲ್, ಶಾಟ್‌ಫುಟ್, ಹಗ್ಗ ಜಗ್ಗಾಟ, ಸ್ಲೋಬೈಕ್ ರೇಸ್ ಹಾಗೂ ಓಟ ಇನ್ನಿತರ ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಮೃತ್ಯುಂಜಯ ದೇವಸ್ಥಾನದ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಸಾಮೂಹಿಕ ಭೋಜನದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು. ನಂತರ ಸಭಾ ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಶಿಕ್ಷಕ ಕಾಯಪಂಡ ಎಂ. ಕಿಶೋರ್ ಸ್ವಾಗತಿಸಿದರು. ಮರೆನಾಡು ಪ್ರೌಢ ಶಾಲೆಯ ಸ್ಥಾಪಕ ಸದಸ್ಯರು ಹಾಗೂ ಮಾಜಿ ಗೌರವ ಕಾರ್ಯದರ್ಶಿ ಕುಪ್ಪುಡೀರ ಐ. ಕಾಳಪ್ಪ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಇವರನ್ನು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಾಪಕ ಕಾರ್ಯದರ್ಶಿ ಸಂಪತ್ ಕೆ.ಎನ್. ವರದಿ ವಾಚನ ಮಾಡಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ದಕ್ಷಿಣ ಕೊಡಗಿನ ಗಡಿಭಾಗದಲ್ಲಿರುವ ಈ ಶಾಲೆಯನ್ನು ಕಟ್ಟಲು ಶ್ರಮಿಸಿದವರನ್ನು ನೆನಪಿಸಿ ಅವರ ಶ್ರಮ ಇನ್ನೂ ಜೀವಂತ ವಾಗಿದೆ ಎಂದು ನುಡಿದರು. ನಮ್ಮ ಹಿನ್ನೆಲೆಗಳು ನಮ್ಮ ಜೀವನದ ಭವಿಷ್ಯವನ್ನು ತೀರ್ಮಾನಿಸಲು ಸಾಧ್ಯವಿಲ್ಲ. ನಮ್ಮ ಜೀವನದ ಭವಿಷ್ಯವನ್ನು ಗುರುತಿಸಿ ನಮ್ಮನ್ನು ಎಲ್ಲಿಯವರೆಗಾದರೂ ಕರೆದುಕೊಂಡು ಹೋಗುವ ಶಕ್ತಿ ನಮ್ಮಲ್ಲಿ ಅಡಗಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ವಿಶೇಷ ಆಹ್ವಾನಿತರಾಗಿ ಕಾಯಪಂಡ ಕುಟುಂಬದ ಅಧ್ಯಕ್ಷ ಕಾಯಪಂಡ ಕೆ. ಅಯ್ಯಪ್ಪ ಅವರು ಶಾಲೆಗೆ ಸ್ಥಳ ದಾನ ಮಾಡಿದವರ ಪರವಾಗಿ ಉಪಸ್ಥಿತರಿದ್ದರು. ಶಾಲೆಯ ಆಡಳಿತ ಮಂಡಳಿಯ ಗೌ. ಕಾರ್ಯ ದರ್ಶಿ ಕುಪ್ಪಣಮಾಡ ನಂಜಮ್ಮ ದೇವಯ್ಯ (ಬೇಬಿ), ಗ್ರಾ.ಪಂ. ಅಧ್ಯಕ್ಷೆ ಮಲ್ಲೇಂಗಡ ಎನ್. ರೀನಾ, ಆಡಳಿತ ಮಂಡಳಿಯ ಖಜಾಂಚಿ ಅಮ್ಮತ್ತೀರ ಎ. ಚಂದ್ರಶೇಖರ್, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಪುತ್ತುಭಗವತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.
೨೦೨೧-೨೨ನೇ ಸಾಲಿನಲ್ಲಿ ೮, ೯ ಮತ್ತು ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಂಬAಧಿಸಿದAತೆ ದತ್ತಿ ನಿಧಿ ಹಾಗೂ ಇತರ ಪ್ರೋತ್ಸಾಹಕರ ಬಹುಮಾನಗಳನ್ನು ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು. ಶಿಕ್ಷಕ ನಾಗರಾಜ್ ವಂದಿಸಿದರು.
ಸAಜೆ ಲಘು ಉಪಹಾರದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಕಲಾವಿದ ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಆರ್ಕೇಸ್ಟಾç ಕಾರ್ಯಕ್ರಮ ಜರುಗಿತು. ರಾತ್ರಿ ಕೂಡ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.