ಗೋಣಿಕೊಪ್ಪಲು, ಡಿ. ೨೧: ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಗ್ರಾಮದ ಎಂ.ಪಿ. ಜಗನ್ ಚಿಣ್ಣಪ್ಪ ಎಂಬವರಿಗೆ ಸೇರಿದ ಹಸುವನ್ನು ಕೊಂದು ಹಾಕಿದೆ. ಇದರಿಂದ ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿರಾಯನ ಆತಂಕ ಷೃಷಿಯಾಗಿದೆ. ಹುಲಿಯೂ ತಡ ರಾತ್ರಿ ಗ್ರಾಮದ ರೈತರ ಕೊಟ್ಟಿಗೆಗೆ ಲಗ್ಗೆ ಇಟ್ಟಿದ್ದು ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ನಂತರ ಅದನ್ನು ಕೊಟ್ಟಿಗೆಯಿಂದ ಎಳೆದುಕೊಂಡು ಹೊರ ಹೋಗಿದೆ.

ಕೊಟ್ಟಿಗೆಯಲ್ಲಿದ್ದ ಕರುವು ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮಾಲೀಕರು ಕೊಟ್ಟಿಗೆಗೆ ತೆರಳಿ ನೋಡಿದಾಗ ಹಸುವನ್ನು ಹುಲಿಯು ಎಳೆದೊಯ್ಯುತ್ತಿರುವುದು ಕಂಡುಬAದಿದೆ.

(ಮೊದಲ ಪುಟದಿಂದ) ಮುಂಜಾನೆಯ ವೇಳೆ ಘಟನೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲಿಯ ಸೆರೆಗೆ ಬೋನ್ ಅಳವಡಿಸಿದ್ದು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ. ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ದ. ಕೊಡಗಿನಲ್ಲಿ ಹುಲಿಯ ಹಾವಳಿ ಇದೀಗ ಮತ್ತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಹಜವಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

- ಹೆಚ್.ಕೆ.ಜಗದೀಶ್