*ಗೋಣಿಕೊಪ್ಪ, ಡಿ. ೨೧: ಅಂಜಿಕೇರಿ ನಾಡ್ ಕೂಟದಿಂದ ಜನವರಿ ೮ ರಂದು ಹುದಿಕೇರಿಯಲ್ಲಿ ೫ಕೆ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕೂಟದ ಸದಸ್ಯ ಚೆಕ್ಕೇರ ಚಂದ್ರಪ್ರಕಾಶ್ ತಿಳಿಸಿದ್ದಾರೆ.
ಮಕ್ಕಳು, ಮಹಿಳೆಯರು ಹಾಗೂ ಪುರುಷರು ಪಾಲ್ಗೊಳ್ಳಬಹುದಾಗಿದೆ. ೧೪ ವಯೋಮಿತಿ, ೧೫ ರಿಂದ ೪೦, ೪೧ ಮೇಲ್ಪಟ್ಟವರಿಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಿಂದ ಗ್ರಾಮದ ರಸ್ತೆಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತರು ತಾ. ೨೮ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಾಗಿದ್ದು, ಪ್ರಥಮ ೩ ಬಹುಮಾನ, ೪-೬ ಸ್ಥಾನಕ್ಕೆ ಬಹುಮಾನ ನೀಡಲಾಗುವುದು. ಪ್ರಮಾಣಪತ್ರ ಕೂಡ ನೀಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ೯೬೨೦೫೯೮೭೨೦, ೯೯೮೬೨೫೨೪೭೪ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಕೂಟದ ಸದಸ್ಯರಾದ ಚೆಕ್ಕೇರ ಬೋಪಣ್ಣ, ಚಂಗುಲAಡ ಪೊನ್ನಪ್ಪ, ನೂರೇರ ಕುಟ್ಟಪ್ಪ ಇದ್ದರು.