ಶ್ರೀಮಂಗಲ, ಡಿ. ೨೧: ನಮ್ಮ ಪೂರ್ವಿಕರು ಮತ್ತು ಹಿರಿಯರು ಬಳುವಳಿಯಾಗಿ ನೀಡಿರುವ ಭೂಮಿಯನ್ನು ಕಳೆದುಕೊಳ್ಳದೇ ಶಾಶ್ವತವಾಗಿ ಕಾಪಾಡಿಕೊಳ್ಳುವಂತೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಕರೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಮಂಗಳವಾರ ನಡೆದ ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿ ಕೋಲ್ ಮಂದ್ ನಮ್ಮೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವ ಜನಾಂಗದಲ್ಲಿ ಜಾಗ ಮಾರಾಟ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಜನಾಂಗ ಉಳಿಯಲು ಭಾಷೆ ಉಳಿಯಬೇಕು ಹಾಗೂ ಕೊಡವ ಭಾಷೆಯ ಬಳಕೆ ಸಾರ್ವಜನಿಕವಾಗಿಯೂ ಹೆಚ್ಚಾಗಬೇಕು.ಜನಾಂಗದ ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಐ.ಪಿ.ಎಸ್. ಹಾಗೂ ಐ.ಎಫ್.ಎಸ್. ಉನ್ನತ ವ್ಯಾಸಂಗದತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜಕ್ಕೆ ರೂ. ೫೦ ಸಾವಿರ ದೇಣಿಗೆಯನ್ನು ವಿಷ್ಣು ಕಾರ್ಯಪ್ಪ ಘೋಷಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಕೊಡವತನದ ಬಗ್ಗೆ ಅಭಿಮಾನ ಬೆಳೆಸಿಕೊಂಡರೆ ಮಾತ್ರ ಅದರ ಬಗ್ಗೆ ಹಿಡಿತ ಸಾಧಿಸಿ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಪೊನ್ನಂಪೇಟೆ ಕೊಡವ ಸಮಾಜ ತನ್ನದೇ ಆದ ರೀತಿಯಲ್ಲಿ ಕೊಡವಾಮೆಯನ್ನು ಬೆಳೆಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊಡವ ಭಾಷೆ ಬೆಳೆಸಲು ಪೂರಕವಾಗಿ ಪುಸ್ತಕ ಭಂಡಾರವನ್ನು ಸ್ಥಾಪಿಸಿದೆ, ವರ ವಧು ಅನ್ವೇಷಣೆಗಾಗಿ ಜಬ್ಭೂಮಿ ಸಂಘಟನೆಯೊAದಿಗೆ ಕಾರ್ಯಾಗಾರವನ್ನು ನಡೆಸುತ್ತಿದೆ ಎಂದು ವಿವರಿಸಿದರು. ಈ ಹಿಂದಿನಿAದಲೂ ಕೊಡವ ಸಾಂಸ್ಕೃತಿಕ ದಿನಾಚರಣೆಯನ್ನು ಆಯೋಜಿಸುವ ಮೂಲಕ ಕೊಡವ ಭಾಷೆ, ಸಂಸ್ಕೃತಿ, ಜಾನಪದ, ಕಲೆ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.

ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ತಂಡದಿAದ ಕೊಡವ ಜಾನಪದ ಕಲಾ ಪ್ರದರ್ಶನವಾದ ತಾಲಿಪಾಟ್, ಕತ್ತಿಯಾಟ್, ಉಮ್ಮತಾಟ್, ನಾಡೆ ಕಾಕುವೊ ಪ್ರದರ್ಶನವನ್ನು ನಡೆಸಲಾಯಿತು.

ಕೊಡವ ಸಾಂಸ್ಕೃತಿಕ ವೈಭವವನ್ನು ಮೆರೆದ ಪೈಪೋಟಿ

ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲೆ ಸ್ಪರ್ಧೆಯಲ್ಲಿ ಹಿರಿಯರು, ಕಿರಿಯರು ವಿಭಾಗದಲ್ಲಿ ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಪರೆಯಕಳಿ, ಕಪ್ಪೆಯಾಟ್, ವಾಲಗತಾಟ್ ಪೈಪೋಟಿಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಅಭಿಮಾನದಿಂದ ಜನಾಂಗ ಬಾಂಧವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಫಲಿತಾಂಶ

ಪುತ್ತರಿ ಕೋಲಾಟ್- ಹಿರಿಯರ ವಿಭಾಗ: ಕಾವೇರಿ ಕಾಲೇಜು ತಂಡ, ಗೋಣಿಕೊಪ್ಪಲು (ಪ್ರ), ಪೂಳೆಮಾಡ್ ಈಶ್ವರ ಮಂದ್ -ಬೇಗೂರು (ದ್ವಿ),ಬಿರುನಾಣಿ ಪುತ್ತು ಭಗವತಿ ತಂಡ (ತೃ).

ಕಿರಿಯರ ವಿಭಾಗ: ಶ್ರೀಮಂಗಲ ನಾಡು ಕೊಡವ ಸಮಾಜ (ಪ್ರ), ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ (ದ್ವಿ), ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾ ಸಂಸ್ಥೆ (ತೃ)

ಬೊಳಕಾಟ್ ಹಿರಿಯರ ವಿಭಾಗ: ಪೂಳೆಮಾಡ್ ಈಶ್ವರ ಮಂದ್ ಬೇಗೂರು (ಪ್ರ), ಪುತ್ತು ಭಗವತಿ ತಂಡ ಬಿರುನಾಣಿ (ದ್ವಿ).

ಕಿರಿಯರ ವಿಭಾಗ: ಅಪ್ಪಚ್ಚಕವಿ ವಿದ್ಯಾಸಂಸ್ಥೆ ಪೊನ್ನಂಪೇಟೆ(ಪ್ರ).

ಪರೆಯಕಳಿ ಹಿರಿಯರ ವಿಭಾಗ: ಪೊಳೆಮಾಡ್ ಈಶ್ವರ ಮಂದ್ ಬೇಗೂರು (ಪ್ರ), ಕಾವೇರಿ ಕಾಲೇಜು ಗೋಣಿಕೊಪ್ಪಲು (ದ್ವಿ),ಪುತ್ತು ಭಗವತಿ ತಂಡ ಬಿರುನಾಣಿ (ತೃ).

ಕಿರಿಯರ ವಿಭಾಗ: ಶ್ರೀಮಂಗಲ ನಾಡು ಕೊಡವ ಸಮಾಜ (ಪ್ರ), ಅಪ್ಪಚ್ಚಕವಿ ವಿದ್ಯಾಸಂಸ್ಥೆ ಪೊನ್ನಪೇಟೆ (ದ್ವಿ), ರೂಟ್ಸ್ ಶಾಲೆ ಟಿ.ಶೆಟ್ಟಿಗೇರಿ(ತೃ).

ಉಮ್ಮತಾಟ್ ಹಿರಿಯರ ವಿಭಾಗ: ಶ್ರೀಮಂಗಲ ನಾಡು ಕೊಡವ ಸಮಾಜ (ಪ್ರ), ಕಾವೇರಿ ಕಾಲೇಜು ಗೋಣಿಕೊಪ್ಪಲು (ದ್ವಿ), ಧಾರ ಮಹಾದೇಶ್ವರ ತಂಡ ಪೂಕಳ (ತೃ).

ಕಿರಿಯರ ವಿಭಾಗ: ಲಯನ್ಸ್ ಶಾಲೆ ಗೋಣಿಕೊಪ್ಪಲು (ಪ್ರ), ಅಪ್ಪಚ್ಚ ಕವಿ ಶಾಲೆ ಪೊನ್ನಂಪೇಟೆ (ದ್ವಿ), ರೂಟ್ಸ್ ಶಾಲೆ ಟಿ.ಶೆಟ್ಟಿಗೇರಿ(ತೃ).ವಾಲಗತ್ತಾಟ್ ಪುರುಷರ ಹಿರಿಯರ ವಿಭಾಗ: ಮಾಚಿಮಾಡ ಡಾಲಿ ಮಂದಣ್ಣ (ಪ್ರ), ಕೊಣಿಯಂಡ ಎನ್. ಮಾದಯ್ಯ (ದ್ವಿ), ಕೋಳೇರ ಅಯ್ಯಪ್ಪ (ತೃ).

ಕಿರಿಯರ ವಿಭಾಗ: ಚೆಟ್ಟಂಗಡ ಪುನಿತ್ (ಪ್ರ), ಕರ್ತಮಾಡ ಅನೂಪ್ ಅಯ್ಯಪ್ಪ (ದ್ವಿ), ಚೊಟ್ಟೆಯಾಂಡಮಾಡ ನಾಣಯ್ಯ(ತೃ).

ಮಹಿಳೆಯರ ಹಿರಿಯರ ವಿಭಾಗ: ಬೊಟ್ಟಂಗಡ ದಶಮಿ ಸದಾ (ಪ್ರ), ತೆಕ್ಕಡ ಕೌಶಿ ಗಿರೀಶ್ (ದ್ವಿ), ಕಾಳಿಮಾಡ ಸೀಮಾ ಪ್ರಶಾಂತ್ (ತೃ).

ಕಿರಿಯರ ವಿಭಾಗ: ಅರಮಣಮಾಡ ಚಿನ್ಮಯ್ (ಪ್ರ), ಮೂಕಳೇರ ಹರ್ಷಿತ್ (ದ್ವಿ), ಐಯದಂಡ ಬಿ.ಮೋನಿಷ್ (ತೃ).

ಕಪ್ಪೆಯಾಟ್ ಹಿರಿಯರ ವಿಭಾಗ: ಬೊಳ್ಳಾಜೀರ ಬೆಳ್ಯಪ್ಪ (ಪ್ರ), ಬೊಟ್ಟಂಗಡ ಚಂಗಪ್ಪ (ದ್ವಿ), ಕಾಳಿಮಾಡ ಪ್ರಜ್ವಲ್ ಪೂವಣ್ಣ (ತೃ).

ಕಿರಿಯರ ವಿಭಾಗ: ಕರ್ತಮಾಡ ಅನುಪ್ ಅಯ್ಯಪ್ಪ (ಪ್ರ), ಬಾಚಂಗಡ ಪೂವಣ್ಣ (ದ್ವಿ), ಸುಜನ್ (ತೃ).

ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಪುತ್ತರಿ ಕೋಲ್ ಮಂದ್ ಕಾರ್ಯಕ್ರಮ ನಡೆಯಿತು. ಇದಲ್ಲದೆ ಈ ಕಾರ್ಯಕ್ರಮದಲ್ಲಿ ಕೊಡವ ಜನಾಂಗದಲ್ಲಿ ವರ ವಧು ಅನ್ವೇಷಣೆಗಾಗಿ "ತಂದ್- ಬೆಂದು" ಕಾರ್ಯಕ್ರಮದ ನೋಂದಣಿ ನಡೆಯಿತು.

ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ,ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಖಾಯಂ ಆಹ್ವಾನಿತರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ನಿರ್ದೇಶಕರುಗಳಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದಾ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಕಾವ್ಯ ಕಾವೇರಮ್ಮ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.

ಸಾಂಸ್ಕೃತಿಕ ಪೈಪೋಟಿಯ ತೀರ್ಪುಗಾರರಾಗಿ ಬೊಳಿಯಂಗಡ ದಾದು ಪೂವಯ್ಯ, ಚೆಟ್ಟಂಗಡ ರವಿ ಸುಬ್ಬಯ್ಯ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಕಾಳಿಮಾಡ ಲತಾ ಮೋಟಯ್ಯ ನಿರ್ವಹಿಸಿದರು.