ನಾಪೋಕ್ಲು, ಡಿ. ೨೧: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡರೆ ಸಮಾಜವನ್ನು ಪರಿವರ್ತಿಸ ಬಹುದಾಗಿದೆ ಎಂದು ಬಲ್ಲಮಾವಟಿ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವ್ಯ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಮುಖ್ಯ. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜು ಶಿಕ್ಷಣ ಪ್ರಮುಖ ಘಟ್ಟ. ಸರಿಯಾದ ಯೋಜನೆ ಹಾಕಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಹಾಗೂ ವೃತ್ತಿಪರತೆಯನ್ನು ಕೈಗೊಂಡರೆ ಯಶಸ್ಸು ಸಾಧ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮನವಟ್ಟಿರ ಹರೀಶ್ ಕುಶಾಲಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿನ ಜೊತೆಗೆ ಸಾಮಾಜಿಕ ಬದುಕು ಕೂಡ ಬಹಳ ಮುಖ್ಯ ಎಂದರು. ಶಿಬಿರಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ಸಮುದಾಯದಲ್ಲಿ ಬೆರೆತು ಸಮುದಾಯದ ನೋವು ನಲಿವುಗಳಲ್ಲಿ ಪಾಲ್ಗೊಳ್ಳುವು ದರ ಮೂಲಕ ಸಮಾಜ ಸೇವೆ, ವ್ಯಕ್ತಿತ್ವ ವಿಕಸನ ರೂಪಿಸುವುದು ರಾಷ್ಟಿçÃಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಎಂದರು.
ಮುಖ್ಯ ಅತಿಥಿಗಳಾಗಿ ಬಲ್ಲಮಾವಟಿ ಗ್ರಾ.ಪಂ. ಉಪಾಧ್ಯಕ್ಷೆ ಬಾಳೆಯಡ ದೀನಾ ಮಾಯಮ್ಮ, ಸದಸ್ಯರಾದ ಮಚ್ಚುರ ರವೀಂದ್ರ, ಚೋಕಿರ ಬಾಭಿ ಭೀಮಯ್ಯ, ಪಿಡಿಓ ಚೌರೀರ ಶರತ್ ಪೂಣಚ್ಚ, ನೇತಾಜಿ ಪ್ರೌಢಶಾಲೆಯ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ, ಸಂಚಾಲಕ ನುಚ್ಚಿಮಣಿಯಂಡ ಚಿಂಗಪ್ಪ, ನಿರ್ದೇಶಕರಾದ ತೋಲಂಡ ಅರುಣ ಕಾವೇರಪ್ಪ, ಚಂಗೇಟಿರ ಕುಮಾರ್ ಸೋಮಣ್ಣ, ಮುಕ್ಕಾಟಿರ ವಿನಯ್, ಬದಂಜೆಟ್ಟೀರ ದೇವಿ ದೇವಯ್ಯ, ಅಪ್ಪುಮಣಿಯಂಡ ನವೀನ್, ಎಫ್ಎಂಸಿ ಕಾಲೇಜಿನ ಆಂಗ್ಲ ವಿಭಾಗದ ಸಂಯೋಜಕ ಕೆ.ಎಂ. ಪೂಣಚ್ಚ, ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಲ್ಸನ್ ಪ್ರಿಯದರ್ಶಿನಿ, ನೇತಾಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಸ್. ಸುರೇಶ್ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಬಿರಾಧಿಕಾರಿ ಡಾ. ಮಹದೇವಯ್ಯ ಸ್ವಾಗತಿಸಿ, ಸಹ ಶಿಬಿರಾಧಿಕಾರಿ ಸಚಿನ್ ನಿರೂಪಿಸಿದರು. ಮಂಜುನಾಥ ಗೌಡ ವಂದಿಸಿದರು.