*ಗೋಣಿಕೊಪ್ಪ, ಡಿ. ೨೧: ಭಾಷೆಯ ಬಗ್ಗೆ ಅತಿಯಾದ ಬಾಂಧವ್ಯ ಮತ್ತು ವ್ಯಾಮೋಹ ಇಲ್ಲದಿದ್ದರೆ ಆ ಜನಾಂಗ ಮತ್ತು ಸಂಸ್ಕೃತಿ ಅಳಿದು ಹೋಗುವುದರಲ್ಲಿ ಅಚ್ಚರಿ ಇಲ್ಲ ಎಂದು ಕಳತ್ಮಾಡು, ಗೋಣಿಕೊಪ್ಪ ಸಮೃದ್ಧಿ ಗೌಡ ಸಂಘದ ಅಧ್ಯಕ್ಷ ಪಡಿಕಲ್ ಯದುಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳತ್ಮಾಡು ಪಡಿಕಲ್ ಮನೆಯಲ್ಲಿ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಆಯೋಜನೆ ಯಾಗಬೇಕಾಗಿದೆ. ಇತರ ಜನಾಂಗದ ಬಗ್ಗೆ ಮಾತನಾಡುವ ಮೊದಲು ನಮ್ಮ ಜನಾಂಗವನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಲು ಬೇಕಾದ ವ್ಯವಸ್ಥಿತ ಕಾರ್ಯ ಗಳನ್ನು ನಾವು ಮಾಡಬೇಕಾಗಿದೆ. ಹಿರಿಯರು ಹೆಚ್ಚಾಗಿ ನಮ್ಮ ಭಾಷೆ ಯನ್ನು ಮಾತನಾಡಿದಾಗ ಮಕ್ಕಳಿಗೆ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇಂದಿನ ಮಕ್ಕಳಿಗೆ ನಮ್ಮ ಭಾಷೆ ಯೊಂದು ಮಾತನಾಡಲು ತಿಳಿಯ ದಿರುವುದು ವಿಪರ್ಯಾಸದ ಬೆಳವಣಿಗೆ. ಇದು ಸಂಸ್ಕೃತಿಯ ಮೇಲೆ ಆತಂಕಕಾರಿ ಪರಿಣಾಮವನ್ನು ಬೀರಲಿದೆ ಎಂದು ಹೇಳಿದರು.
ನಿವೃತ್ತ ಜಂಟಿ ಆಯುಕ್ತ ಪಡಿಕಲ್ ಚಂಗಪ್ಪ ಕಾರ್ಯಕ್ರಮ ಉದ್ಘಾಟಿ ಸಿದರು. ಮುಖ್ಯ ಅತಿಥಿಗಳಾಗಿ ಬಗ್ಗೆ ಮಾತನಾಡುವ ಮೊದಲು ನಮ್ಮ ಜನಾಂಗವನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಲು ಬೇಕಾದ ವ್ಯವಸ್ಥಿತ ಕಾರ್ಯ ಗಳನ್ನು ನಾವು ಮಾಡಬೇಕಾಗಿದೆ. ಹಿರಿಯರು ಹೆಚ್ಚಾಗಿ ನಮ್ಮ ಭಾಷೆ ಯನ್ನು ಮಾತನಾಡಿದಾಗ ಮಕ್ಕಳಿಗೆ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇಂದಿನ ಮಕ್ಕಳಿಗೆ ನಮ್ಮ ಭಾಷೆ ಯೊಂದು ಮಾತನಾಡಲು ತಿಳಿಯ ದಿರುವುದು ವಿಪರ್ಯಾಸದ ಬೆಳವಣಿಗೆ. ಇದು ಸಂಸ್ಕೃತಿಯ ಮೇಲೆ ಆತಂಕಕಾರಿ ಪರಿಣಾಮವನ್ನು ಬೀರಲಿದೆ ಎಂದು ಹೇಳಿದರು.
ನಿವೃತ್ತ ಜಂಟಿ ಆಯುಕ್ತ ಪಡಿಕಲ್ ಚಂಗಪ್ಪ ಕಾರ್ಯಕ್ರಮ ಉದ್ಘಾಟಿ ಸಿದರು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಗೌಡ ಸಮಾಜ ನಿರ್ದೇಶಕ ಈರಪ್ಪ, ಗೌಡ ಸಂಸ್ಕöÈತಿ, ಆಚಾರ ವಿಚಾರಗಳು ಮತ್ತು ಸಮುದಾಯದ ಬೆಳವಣಿಗೆಯ ಬಗ್ಗೆ ಮಾತನಾಡಿದರು. ನಂತರ ಸೋಬಾನೆ ಪದ, ಜಾನಪದ ಗೀತೆಗಳು, ಸಂಸ್ಕೃತಿಗಳು, ಮದುವೆ ಶಾಸ್ತç ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಾಯಿರ ಕಿರಣ್, ಮಡ್ತಲೆ ಯತೀಶ್, ಪಡಿಕಲ್ ಮನೋಹರ್, ಪಡಿಕಲ್ ಸಂದ್ಯಾ ಯಾದವ್, ಪಡಿಕಲ್ ಮಾಲಿನ ಮನು ಸೇರಿದಂತೆ ಕಳತ್ಮಾಡು, ಕೈಕೇರಿ, ಗೊಟ್ಟಡ, ಗೋಣಿಕೊಪ್ಪದ ಗೌಡ ಸಮುದಾಯ ಬಾಂಧವರು ಹಾಜರಿದ್ದರು.