ಮಡಿಕೇರಿ, ಡಿ. ೨೧: ಮಡಿಕೇರಿ ಮ್ಯಾನ್ಸ್ ಕಾಂಪೌAಡ್ ಕ್ಲಬ್ ವತಿಯಿಂದ ಜ. ೭ ಮತ್ತು ೮ ರಂದು ಜಿಲ್ಲಾಮಟ್ಟದ ಮುಕ್ತ ೫+೨ ಆಟಗಾರರ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ. ನಗರದ ಮ್ಯಾನ್ಸ್ ಕಾಂಪೌAಡ್ (ಜಿಲ್ಲಾ ಕ್ರೀಡಾಂಗಣ) ಫುಟ್ಬಾಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ ರೂ. ೨೫,೦೦೦, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧೫,೦೦೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ಪತ್ಯೇಕವಾಗಿ ಉತ್ತಮ ಆಟಗಾರ, ಉತ್ತಮ ಗೋಲ್ ಕೀಪರ್, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು.
ಮೊದಲು ಬಂದ ೩೨ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಪ್ರವೇಶ ಶುಲ್ಕ ರೂ. ೨ ಸಾವಿರ ಆಗಿರುತ್ತದೆ. ಆಸಕ್ತರು ತಾ. ೨೮ ರೊಳಗಾಗಿ ಮುಂಗಡ ರೂ. ೧ ಸಾವಿರ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಾಣಿಗಾಗಿ ೭೦೧೯೯೦೯೪೯೫, ೯೪೪೮೯೭೬೪೦೬, ೮೯೭೧೫೬೩೨೪೬, ೯೫೩೮೧೫೬೬೬೩ ಸಂಪರ್ಕಿಸುವAತೆ ಮ್ಯಾನ್ಸ್ ಕಾಂಪೌAಡ್ ಕ್ಲಬ್ ಕಾರ್ಯಕಾರಿ ಸಮಿತಿ ಮನವಿ ಮಾಡಿದೆ.