ಮಡಿಕೇರಿ, ಡಿ. ೨೧: ರಾಷ್ಟಿçÃಯ ಕ್ರಿಕೆಟ್ ಟೂರ್ನಿಗಳಾದ ಹೆಸರಾಂತ ‘ಸೈಯದ್ ಮುಷ್ತಕ್ ಆಲಿ’ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಇದೀಗ ಪ್ರತಿಷ್ಠಿತ ರಣಜಿ ಟ್ರೋಫಿಯಲ್ಲಿಯೂ ಸೇರಿದಂತೆ ಶ್ರೇಷ್ಠಮಟ್ಟದ ಬೌಲಿಂಗ್ ಮೂಲಕ ವಿಕೆಟ್ಗಳನ್ನು ಪಡೆಯುತ್ತಿರುವ ಕೊಡಗಿನ ಯುವ ಕ್ರಿಕೆಟಿಗ ಮಾಚಿಮಾಡ ವಿದ್ವತ್ ಕಾವೇರಪ್ಪ ಕರ್ನಾಟಕ ತಂಡದ ಅಗ್ರ ಫಾಸ್ಟ್ ಬೌಲರ್ ಆಗಿ ಹೊರಹೊಮ್ಮುತ್ತಿದ್ದಾರೆ.
ಕಳೆದ ವರ್ಷವಷ್ಟೆ ಭಾರತದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾದ ರಣಜಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕಾವೇರಪ್ಪ ನಂತರ ನಡೆದ ಎಲ್ಲಾ ಪ್ರಮುಖ ಕ್ರಿಕೆಟ್ ಪಂದ್ಯಾಟಗಳಲ್ಲಿ ಗಣನೀಯ ಸಾಧನೆ ಗೈದಿದ್ದಾರೆ. ಕಳೆದ ರಣಜಿಯಲ್ಲಿ ಕರ್ನಾಟಕ ರಾಜ್ಯ ತಂಡವು ಟೂರ್ನಿಯಿಂದ ಬೇಗನೆ ಹೊರಗುಳಿದ ಕಾರಣ ಈ ಟೂರ್ನಿಯಲ್ಲಿ ವಿದ್ವತ್ ಕೇವಲ ೧ ವಿಕೆಟ್ ಗಳಿಸಲು ಸಫಲವಾದರು. ಆದರೆ ನಂತರದಲ್ಲಿ ನಡೆದ ರಾಜ್ಯಮಟ್ಟದ ಮಹಾರಾಜ ಕಪ್ ಟಿ-೨೦, ರಾಷ್ಟಿçÃಯ ಮಟ್ಟದ ಟಿ-೨೦
(ಮೊದಲ ಪುಟದಿಂದ) ಸೈಯದ್ ಮುಷ್ತಕ್ ಆಲಿ ಟ್ರೋಫಿ ಮತ್ತು ರಾಷ್ಟಿçÃಯ ಮಟ್ಟದ ಏಕದಿನ ಪಂದ್ಯಾಟ ವಿಜಯ್ ಹಜಾರೆ ಟ್ರೋಫಿಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಲ್ಲದೆ ಇದೀಗ ಕರ್ನಾಟಕ ತಂಡದ ಅಗ್ರ ಬೌಲರ್ ಎಂದೇ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕರ್ನಾಟಕವು ತನ್ನ ಎರಡನೆಯ ಪಂದ್ಯ ಆಟವಾಡುತ್ತಿದ್ದು, ಈಗಾಗಲೇ ವಿದ್ವತ್ ೯ ವಿಕೆಟ್ಗಳನ್ನು ಕಬಳಿಸಿ ಟೂರ್ನಿಯಲ್ಲಿ ಆರಂಭಿಕ ಹಂತದ ಮುನ್ನಡೆಗೆ ಕಾರಣರಾಗಿದ್ದಾರೆ.
ಪ್ರಸ್ತುತ ವರ್ಷ ನಡೆದ ಮಹಾರಾಜ ಕಪ್ ಟಿ-೨೦ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಗುಲ್ಬರ್ಗಾ ಟೈಟನ್ಸ್ ಫ್ರಾಂಚೈಸಿ ಪರ ಆಡಿದ ವಿದ್ವತ್ ಟೂರ್ನಿಯ ಗರಿಷ್ಠ ವಿಕೆಟ್ಗಳಿಸಿದ್ದಲ್ಲದೆ ೧೨ ಪಂದ್ಯಗಳಲ್ಲಿ ಒಟ್ಟು ೧೭ ವಿಕೆಟ್ಗಳನ್ನು ಪಡೆದು ಗುಲ್ಬರ್ಗಾ ತಂಡದ ಟೂರ್ನಿ ಗೆಲುವಿಗೆ ಪ್ರಮುಖ ಕಾರಣರಾದರು.
ನಂತರ ನಡೆದ ರಾಷ್ಟಿçÃಯ ಮಟ್ಟದ ಸೈಯದ್ ಮುಷ್ತಕ್ ಅಲಿ ಟ್ರೋಫಿಯಲ್ಲಿ ಕೇವಲ ೭ ಪಂದ್ಯಗಳನ್ನು ಆಡಿ ೧೮ ವಿಕೆಟ್ಗಳನ್ನು ಗಳಿಸಿದ ವಿದ್ವತ್ ಟೂರ್ನಿಯಲ್ಲಿನ ಗರಿಷ್ಠ ವಿಕೆಟ್ಗಳನ್ನು ಪಡೆದವರ ಪಟ್ಟಿಯಲ್ಲಿ ೨ನೆಯ ಸ್ಥಾನ ಪಡೆದುಕೊಂಡರು. ಟಿ-೨೦ ಪಂದ್ಯವಾಗಿದ್ದರೂ ಓವರ್ಗೆ ಸರಾಸರಿ ೫.೮೧ ರನ್ಗಳನ್ನು ಮಾತ್ರ ನೀಡುವ ಮೂಲಕ ಗಮನ ಸೆಳೆದರು. ಇತ್ತೀಚೆಗಷ್ಟೆ ಸಮಾಪ್ತಿಗೊಂಡ ರಾಷ್ಟಿçÃಯ ಮಟ್ಟದ ಏಕದಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ೩ನೇ ಸ್ಥಾನ ಗಳಿಸಿದ್ದು, ೮ ಪಂದ್ಯಗಳಲ್ಲಿ ೧೭ ವಿಕೆಟ್ ಹಾಗೂ ಓವರ್ಗೆ ಕೇವಲ ೩.೫೩ ಸರಾಸರಿ ರನ್ಗಳನ್ನು ನೀಡಿ ತಂಡದ ಬೌಲಿಂಗ್ ಪಡೆಯ ಬೆನ್ನೆಲುಬಾಗಿ ನಿಂತರು. ಇದೀಗ ೨ನೇ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾಗವಹಿಸುತ್ತಿರುವ ವಿದ್ವತ್ ೨ ಪಂದ್ಯಗಳಲ್ಲಿ ೯ ವಿಕೆಟ್ ಗಳನ್ನು ಈಗಾಗಲೇ ಗಳಿಸಿದ್ದಾರೆ.