ಮಡಿಕೇರಿ, ಡಿ. ೨೦: ಮೈಸೂರಿನ ಒಡಿಪಿ ಟ್ರೆöÊನಿಂಗ್ ಸೆಂಟರ್‌ನಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಸರ್ವೋದಯ ಸಂಕಲ್ಪ ಶಿಬಿರ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ್ ಶಿಬಿರವನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ಸಿ. ನಾರಾಯಣ ಸ್ವಾಮಿ, ಎಐಸಿಸಿ ಕಾರ್ಯದರ್ಶಿ ಹಾಗೂ ಗುಜರಾತ್ ಉಸ್ತುವಾರಿ ಬಿ.ಎಂ. ಸಂದೀಪ್, ರಾಜ್ಯ ಸಂಚಾಲಕ ವಿಜಯ್ ಸಿಂಗ್, ರಾಷ್ಟಿçÃಯ ಸಲಹೆಗಾರ ಘೋರ್ಪಡೆ, ಹುಣಸೂರು ಶಾಸಕ ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ ಮತ್ತಿತರರು ಪಾಲ್ಗೊಂಡಿದ್ದರು.

ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಕೊಡಗು ಜಿಲ್ಲೆಯ ಪ್ರತಿನಿಧಿಗಳಾದ ಶಿವಾನಂದ, ಅಯಿಲಪಂಡ ಪುಷ್ಪ ಪೂಣಚ್ಚ, ವಸಂತ್ ಟಿ.ಕೆ., ಪಾಂಡನ ವಿವೇಕಾನಂದ, ಚೆರಿಯಮನೆ ಭಾರ್ಗವ, ಸಲೀಮ್, ಮಹಾದೇವ್, ಗಣೇಶ್, ನಾಚಪ್ಪ, ಮುತ್ತಮ್ಮ, ಸರಸು, ತಿಮ್ಮಯ್ಯ ಕೆ.ಹೆಚ್., ಶುಭಕರ, ಚೆನ್ನಪ್ಪ, ಬಸವರಾಜ್, ಸುರೇಶ್, ನವೀನ್ ಸೇರಿದಂತೆ ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು.