ಮಡಿಕೇರಿ, ಡಿ. ೨೦: ಮಡಿಕೇರಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಬಯಲು ಶೌಚ ಮುಕ್ತ ಪಟ್ಟಣವೆಂದು ಘೋಷಣೆ ಮಾಡಲಾಗಿದ್ದು, ತಲೆ ಮೇಲೆ ಮಲ ಹೊರುವುದು ಹಾಗೂ ತೆರೆದ ಚರಂಡಿಗೆ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅದರಂತೆ “ದಿ ಎಂಪ್ಲಾಯ್‌ಮೆAಟ್ ಆಫ್ ಮ್ಯಾನ್ಯುಯಲ್ ಸ್ಕಾö್ಯವೆಂಜರ್ಸ್ ಅಂಡ್ ಡ್ರೆöÊ ಲ್ಯಾಟ್ರಿನ್ ಆಕ್ಟ್ ೨೦೧೩”ರ ರೀತ್ಯಾ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್‌ನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಪರ್ಯಾಯವಾಗಿ ನಗರಸಭೆಯಲ್ಲಿ ೩ ಸಾವಿರ ಲೀಟರ್ ಸಾಮರ್ಥ್ಯದ ಸಕ್ಕಿಂಗ್ ಯಂತ್ರ ಹೊಂದಿರುವ ವಾಹನವು ಲಭ್ಯವಿದ್ದು, ನಿಗದಿತ ಶುಲ್ಕವನ್ನು ಪಾವತಿಸಿ, ನಗರಸಭೆ ವಾಹನದಿಂದ ಶೌಚಾಲಯದ ಪಿಟ್‌ಗಳನ್ನು ಸ್ವಚ್ಛಗೊಳಿಸತಕ್ಕದ್ದು. ಈ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್‌ನ್ನು ಸ್ವಚ್ಛಗೊಳಿಸಿದಲ್ಲಿ ಅಥವಾ ಮಲ ಹೊರುವ ಪದ್ಧತಿಗೆ ಪ್ರೋತ್ಸಾಹಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಹಾಗೂ ಸಕ್ಕಿಂಗ್ ಯಂತ್ರದ ಸೇವೆ ಪಡೆಯಲು ಕಚೇರಿ ವೇಳೆಯಲ್ಲಿ ನಗರಸಭೆಯ ಆರೋಗ್ಯ ಶಾಖೆಯಲ್ಲಿ ಸಂಪರ್ಕಿಸಬಹುದು.

ನಗರಸಭೆ ವ್ಯಾಪ್ತಿಯಲ್ಲಿ ವಾಸ್ತವ್ಯದ ದರ ಪ್ರತಿ ಟ್ರಿಪ್‌ಗೆ ೩ ಸಾವಿರ, ಹೆಚ್ಚುವರಿ ಪ್ರತಿ ಟ್ರಿಪ್‌ಗೆ ೧೫೦೦, ವಾಣಿಜ್ಯ ದರ ಪ್ರತಿ ಟ್ರಿಪ್‌ಗೆ ೪ ಸಾವಿರ ರೂ. ಹೆಚ್ಚುವರಿ ಪ್ರತಿ ಟ್ರಿಪ್‌ಗೆ ರೂ. ೨ ಸಾವಿರ. ನಗರಸಭೆ ಸರಹದ್ದಿನ ಹೊರಗಡೆ ವಾಸ್ತವ ದರ ಪ್ರತಿ ಟ್ರಿಪ್‌ಗೆ ರೂ. ೪ ಸಾವಿರ, ಹೆಚ್ಚುವರಿ ಪ್ರತಿ ಟ್ರಿಪ್‌ಗೆ ರೂ. ೨ ಸಾವಿರ, ವಾಣಿಜ್ಯ ದರ ಪ್ರತಿ ಟ್ರಿಪ್‌ಗೆ ರೂ. ೬ ಸಾವಿರ ಮತ್ತು ಹೆಚ್ಚುವರಿ ಪ್ರತಿ ಟ್ರಿಪ್‌ಗೆ ರೂ.೩ ಸಾವಿರ ಆಗಿದೆ. ನಗರಸಭೆ ಸರಹದ್ದಿನ ಹೊರಗಡೆ ಪ್ರತಿ ಕಿ.ಮೀ. ರೂ. ೪೦ ರಂತೆ ವಾಹನ ಬಾಡಿಗೆ ಪಾವತಿಸಬೇಕು.

ನಗರದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜಿಸದೆ ಶೌಚಾಲಯಗಳನ್ನು ಬಳಸುವುದು. ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಮಾಹಿತಿಯು ಟಾಯ್ಲೇಟ್ ಲಾಕೆಟರ್ ಆ್ಯಪ್‌ನಲ್ಲಿ ಪಡೆಯಬಹುದು. ಸಾರ್ವಜನಿಕ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದ್ದು, ಶೌಚಕ್ಕೆ ರೂ. ೫ ಗಳನ್ನು ಮಾತ್ರ ಪಾವತಿಸುವುದು. ಸಾರ್ವಜನಿಕ ಸ್ಥಳದಲ್ಲಿ ಮಲ-ಮೂತ್ರ ವಿಸರ್ಜಿಸಿದಲ್ಲಿ ರೂ. ೨೫೦ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.