ಮಡಿಕೇರಿ, ಡಿ. ೨೦: ‘ಗ್ರಾಮ ಒನ್’ ಯೋಜನೆಯನ್ನು ರಾಜ್ಯದ ಜಿಲ್ಲೆಗಳಲ್ಲಿ ಈಗಾಗಲೇ ಸನ್ಮಾನ್ಯ ಮುಖ್ಯ ಮಂತ್ರಿಗಳು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಸಹಯೋಗದೊಂದಿಗೆ ಲೋಕಾರ್ಪಣೆಗೊಳಿಸಿದ್ದು, ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ೧೪ ಗ್ರಾಮ ಪಂಚಾಯಿತಿಗಳಲ್ಲಿ (ಗ್ರೇಡ್-೨ರಡಿ) ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ ಒನ್” ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿಯ ಬೆಟ್ಟಗೇರಿ, ಕರಿಕೆ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ, ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಸೋಮವಾರಪೇಟೆ ಹೋಬಳಿಯ ಗರ್ವಾಲೆ. ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್, ಕುಶಾಲನಗರ ಹೋಬಳಿಯ ನಾಲೂರು-ಶಿರಂಗಾಲ, ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯ ಕಾಕೋಟುಪರಂಬು, ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು, ಪೊನ್ನಪ್ಪಸಂತೆ, ಹುದಿಕೇರಿ ಹೋಬಳಿಯ ಬಲ್ಯಮಂಡೂರು, ಶ್ರೀಮಂಗಲ ಹೋಬಳಿಯ ಕೆ. ಬಾಡಗ, ಪೊನ್ನಂಪೇಟೆ ಹೋಬಳಿಯ ಬಿ. ಶೆಟ್ಟಿಗೇರಿ ಮತ್ತು ಕಿರುಗೂರು.

ಆಸಕ್ತ ಪ್ರಾಂಚೈಸಿಗಳು hಣಣಠಿs://ತಿತಿತಿ.gಡಿಚಿmಚಿoಟಿebಟs.ಛಿom/useಡಿs/ಡಿegisಣಡಿಚಿಣioಟಿ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿಯವರ ಕಚೇರಿ(ದೂರವಾಣಿ ಸಂಖ್ಯೆ: ೮೮೬೧೬೭೨೧೨೦)ನ್ನು ಸಂಪರ್ಕಿಸಬಹುದು.