ಕೂಡಿಗೆ, ಡಿ. ೨೦: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದಲ್ಲಿರುವ ಗ್ರಾಮ ದೇವತೆಯಾದ ಮಟ್ಟಿಗಮ್ಮ ದೇವಾಲಯದ ಕಟ್ಟಡವು ಉದ್ಘಾಟನೆಗೆ ಸಿದ್ಧವಾಗಿದೆ. ಶಿಥಿಲಾವಸ್ಥೆಯಲ್ಲಿ ಇದ್ದುದರಿಂದ ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರು ಹಳೆಯ ದೇವಾಲಯದ ಕಟ್ಟಡವನ್ನು ಕೆಡವಿ ನೂತನವಾಗಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಅಧುನಿಕ ಶೈಲಿಯ ಧಾರ್ಮಿಕ ಹಿನ್ನೆಲೆ ಒಳಗೊಂಡAತೆ ದಾನಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿದೆ.
ಸರಕಾರದ ಯಾವುದೇ ರೀತಿಯ ಅನುದಾನವನ್ನು ಪಡೆಯದೆ ಸಾರ್ವಜನಿಕರ, ದಾನಿಗಳ ಸಹಕಾರದೊಂದಿಗೆ ಗ್ರಾಮ ದೇವತೆಯಾದ ಮಟ್ಟಿಗಮ್ಮ ದೇವ ತೆಯ ದೇವಾಲ ಯದ ಕಟ್ಟಡವು ಹೊಸ ಮಾದರಿ ಯಲ್ಲಿ ಕಣಿವೆ ಆರ್.ಆರ್. ಕುಮಾರ್ ಅವರ ನಕ್ಷೆಯ ವಿನ್ಯಾಸ ದೊಂದಿಗೆ ಆಕರ್ಷಕವಾದ ನೂತನ ದೇವಾಲ ಯದ ಕಟ್ಟಡವಾಗಿ ಶಿರಂಗಾಲ ಗ್ರಾಮ ದಲ್ಲಿ ಮೂಡಿ ಬರುತ್ತಿದೆ.
೧೦೦ ಮೀಟರ್ ಉದ್ದ ಮತ್ತು ೫೦ ಮೀಟರ್ ಅಗಲದಲ್ಲಿ ನೂತನ ಮಾದರಿಯಲ್ಲಿ ಪ್ರಮುಖ ಬೃಹತ್ ದ್ವಾರ ಸೇರಿದಂತೆ ಮೂರು ದ್ವಾರಗಳ ನಿರ್ಮಾಣ ಕಾರ್ಯ ನಡೆದಿದೆ. ತಂತ್ರಿಗಳ ಸೂಚನೆ ಮತ್ತು ಶಾಸ್ತೊçÃಕ್ತವಾಗಿ ದೇವಾಲಯದ ಗೋಪುರದ ನಿರ್ಮಾಣ ಸೇರಿದಂತೆ ನೂತನ ಶೈಲಿಯ ಮುಂಭಾಗದ ಕಟ್ಟಡ ಮತ್ತು ೧೨ ಲಕ್ಷ ವೆಚ್ಚದ ಧ್ವಜಸಂಭ್ತ (ಗರುಡು ಕಂಬ) ನಿರ್ಮಾಣಗೊಂಡಿದೆ.
ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ದಾನಿಗಳು ಸೇರಿದಂತೆ ರಾಜ್ಯ ವಿವಿಧ ಭಾಗದ ದಾನಿಗಳು ಮತ್ತು ಸಾರ್ವಜನಿಕರು, ಭಕ್ತರು, ದಾನ ರೂಪದಲ್ಲಿ ಲಕ್ಷಗಟ್ಟಲೆ ಹಣವನ್ನು ನೀಡಿದ್ದಾರೆ.
ಮೂಲತಃ ಶಿರಂಗಾಲ ಗ್ರಾಮದಲ್ಲಿ ಜನಿಸಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಉದ್ಯೋಗದಲ್ಲಿರುವವರು ಮತ್ತು ಉದ್ಯಮಿಗಳು ವಸ್ತುಗಳ ಮತ್ತು ಹಣದ ರೂಪದಲ್ಲಿ ಸಹಕಾರವನ್ನು ನೀಡಿದ್ದಾರೆ. ಇವರುಗಳ ಸಹಕಾರದೊಂದಿಗೆ ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ದೇವಾಲಯದ ಕಟ್ಟಡವು ದೇವಾಲಯ ಸಮಿತಿಯ ನೇತೃತ್ವದಲ್ಲಿ ನಿರ್ಮಾಣಗೊಂಡಿದೆ ಎಂದು ದೇವಾಲಯ ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ ತಿಳಿಸಿದರು.
ದೇವಾಲಯ ಕಟ್ಟಡಕ್ಕೆ ಶಾಸಕ ಅಪ್ಪಚ್ಚು ರಂಜನ್ ಒಂದು ಲಕ್ಷ ರೂಪಾಯಿ ಕೊಡುಗೆ ನೀಡಿದ್ದಾರೆ. ಈಗಾಗಲೇ ಶೇ. ೯೦ ರಷ್ಟು ಕೆಲಸ ಮುಗಿದ್ದಿದು, ಮುಂದಿನ ತಿಂಗಳಲ್ಲಿ ದೇವಾಲಯದ ಕಲಶ ಸ್ಥಾಪನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಮಹೇಶ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಎಸ್.ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣ್ಣ, ಇಂಜಿನಿಯರ್ ಆರ್.ಆರ್. ಕುಮಾರ್, ಕಟ್ಟಡ ನಿರ್ಮಾಣ ಸಮಿತಿ ಸದಸ್ಯರು, ದೇವಾಲಯ ಸಮಿತಿಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.