ಪೊನ್ನಂಪೇಟೆ, ಡಿ. ೨೦ : ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ತಾ. ೨೧ ರಿಂದ ೨೭ ವರಗೆ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಶಿಬಿರದ ಉದ್ಘಾಟನೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಎನ್.ಎಸ್.ಎಸ್ ಅಧಿಕಾರಿ ಮಂದೆಯAಡ ವನಿತ್ ಕುಮಾರ್ ಮತ್ತು ಮಚ್ಚಮಾಡ ರೀತಾ ತಿಳಿಸಿದ್ದಾರೆ.