ಮಡಿಕೇರಿ, ಡಿ. ೧೯: ಓಜಸ್ವಿ ಫೌಂಡೇಷÀನ್‌ನ ಓಜಸ್ವಿ ಸ್ಫ್ಪೂರ್ತಿ ವೀರಾಜಪೇಟೆ ತಾಲೂಕು ಮಟ್ಟದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಗೋಣಿಕೊಪ್ಪಲು ಲಯನ್ಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ವೀರಾಜಪೇಟೆ ತಾಲೂಕು ಸರ್ಕಾರಿ ಶಾಲೆಗಳ ಸುಮಾರು ೫೦೦ ಮಂದಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂರ‍್ರಾಷ್ಟಿçÃಯ ಲೈಫ್ ಸ್ಕಿಲ್ ಕೋಚ್ ಮೈಸೂರಿನ ಆರ್.ಎ. ಚೇತನ್‌ರಾಮ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಮಡಿಕೇರಿ ಕೂರ್ಗ್ ಎಜುಕೇಷನ್ ಫಂಡ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮುತ್ತಣ್ಣ, ಮಾಜಿ ಅಧ್ಯಕ್ಷ ಕೆ.ಪಿ. ಉತ್ತಪ್ಪ, ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಚಿಣ್ಣಪ್ಪ, ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ, ಡಿಡಿಪಿಐ ರಂಗಮಾದಯ್ಯ, ವೀರಾಜಪೇಟೆ ತಾಲೂಕು ಬಿಇಓ ಶ್ರೀಶೈಲ ಬಿಳಗಿ, ಎಸ್‌ಎಸ್‌ಎಲ್‌ಸಿ ನೋಡಲ್ ಆಫೀಸರ್ ಅಯ್ಯಪ್ಪ ಪಿ.ಆರ್., ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಲಯನ್ಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಡಿ. ತಂಗಮ್ಮ ಇದ್ದರು.

ಸಂಪನ್ಮೂಲ ವ್ಯಕ್ತಿ ಆರ್.ಎ. ಚೇತನ್ ರಾಮ್ ಪ್ರೇರಣೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಮಾಹಿತಿ ನೀಡಿದರು. ಹಾಸನದ ಪಿರಮಿಡ್ ಸೊಸೈಟಿ ಮೂವ್‌ಮೆಂಟ್‌ನ ಷಡಕ್ಷರಿ ಸಿ.ಎಸ್. ಧ್ಯಾನ ಅಭ್ಯಾಸ ಕುರಿತು ಮಾಹಿತಿ ನೀಡಿದರು.

ಬೆಂಗಳೂರಿನ ಸಂಕಲ್ಪ್ ಮುಖ್ಯಸ್ಥ ಸತೀಶ್ ಬಿ.ಕೆ. ಕೌಶಲ್ಯ ಕರ್ನಾಟಕ ಯೋಜನೆ ಕುರಿತ ಅರಿವು, ಕೋರ್ಸ್ ಮತ್ತು ಜಾಗೃತಿ ಹಾಗೂ ಅವಕಾಶಗಳ ಬಗ್ಗೆ ತಿಳಿಸಿದರು. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬAಧಿಸಿದAತೆ ಪೊನ್ನಂಪೇಟೆ ತಾಲೂಕು ಅಭಿವೃದ್ಧಿ ಅಧಿಕಾರಿ ಬಿಸಿಡಬ್ಯುö್ಯಡಿ ಹೆಚ್.ಸಿ. ನಾಗರಾಜು ಮತ್ತು ಪೊನ್ನಂಪೇಟೆ ತಾಲೂಕು ಬುಡಕಟ್ಟು ಕ್ಷೇಮಾಭಿವೃದ್ಧಿ ಅಧಿಕಾರಿ ಗುರುಶಾಂತಪ್ಪ, ಎಸ್‌ಡಬ್ಯುಒ ರಜಿತ್ ಮಾಹಿತಿಯನ್ನು ನೀಡಿದರು.

ಓಜಸ್ವಿ ಫೌಂಡೇಷನ್ ಸಂಸ್ಥಾಪಕಿ ಡಾ. ಕವಿತಾ ಪಿ.ಸಿ. ಮತ್ತು ಓಜಸ್ವಿ ಟ್ರಸ್ಟ್ನ ಟ್ರಸ್ಟ್ನ ವಿಜಿತ ಯು.ಜಿ., ಬ್ರಿಜೇಶ್ ಸಿ.ಎ. ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.