ಕುಶಾಲನಗರ, ಡಿ. ೧೯: ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಸಮರ್ಥಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನ ಮಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ವಿರುದ್ಧ ಕುಶಾಲನಗರ ನಗರ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಸೇರಿದ ಬಿಜೆಪಿ ಮುಖಂಡರು ಕಾರ್ಯ ಕರ್ತರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೋಮವಾರಪೇಟೆ ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಪುರಸಭೆ ಅಧ್ಯಕ್ಷ ಬಿ. ಜಯವರ್ಧನ್, ಕುಡ ಅಧ್ಯಕ್ಷ ಎಂ.ಎA ಚರಣ್, ಬಿಜೆಪಿ ವಕ್ತಾರ ಕೆ.ಜಿ ಮನು, ಕುಡ ನಿರ್ದೇಶಕ ವೈಶಾಕ್, ಪ್ರಮುಖರಾದ ಎಂ.ಡಿ ಕೃಷ್ಣಪ್ಪ, ಶಿವಾಜಿರಾವ್, ಮಂಡೇಪAಡ ಬೋಸ್ ಮೊಣ್ಣಪ್ಪ, ಡಿ.ಆರ್ ಸೋಮಶೇಖರ್, ವರದ, ವೇದಾವತಿ, ಸುಮನ್ ಮತ್ತಿತರರು ಇದ್ದರು.